×
Ad

ಭಾರತ vs ದಕ್ಷಿಣ ಆಫ್ರಿಕಾ ಮೊದಲ ಟಿ20: ಡರ್ಬನ್‌ನಲ್ಲಿ ಮಳೆಯಿಂದಾಗಿ ಟಾಸ್ ವಿಳಂಬ

Update: 2023-12-10 20:08 IST

Photo : x/@bcci

ಡರ್ಬನ್: ಇಲ್ಲಿನ ಕಿಂಗ್ಸ್ ಮೀಡ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ vs ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟಿ20 ಪಂದ್ಯಕ್ಕೆ ತುಂತುರು ಮಳೆ ಅಡ್ಡಿಯಾಗುತ್ತಿದ್ದು, ಸಂಜೆ 7 ಗಂಟೆಗೆ ನಡೆಯಬೇಕಿದ್ದ ಟಾಸ್ ವಿಳಂಬವಾಗಿದೆ.

ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ 4-1 ಗೋಲುಗಳಿಂದ ಪ್ರಭಾವಿ ಜಯಗಳಿಸುವ ಮೂಲಕ ಟೀಮ್ ಇಂಡಿಯಾ ರವಿವಾರ ಮೂರು ಪಂದ್ಯಗಳ ಸರಣಿಯ ಮೊದಲ ಟಿ20 ಯೊಂದಿಗೆ ದಕ್ಷಿಣ ಆಫ್ರಿಕಾದಲ್ಲಿ ತಮ್ಮ ಪ್ರವಾಸವನ್ನು ಪ್ರಾರಂಭಿಸುತ್ತಿದೆ. ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಮ್ ಇಂಡಿಯಾ ಕಿಂಗ್ಸ್‌ಮೀಡ್‌ನಲ್ಲಿ ಏಡನ್ ಮಾರ್ಕ್ರಾಮ್ ಬಳಗವನ್ನು ಎದುರಿಸಲಿದೆ.

ಅನುಭವಿಗಳಿಲ್ಲದೇಯುವ ಆಟಗಾರರನ್ನು ಹೊಂದಿರುವ ಸೂರ್ಯಕುಮಾರ್ ಯಾದವ್ ಬಳಗಕ್ಕೆ ಆಲ್‌ರೌಂಡರ್ ರವೀಂದ್ರ ಜಡೇಜಾ ಮತ್ತು ಆರಂಭಿಕ ಆಟಗಾರ ಶುಭಮನ್ ಗಿಲ್ ಅವರ ಸೇವೆ ಲಭ್ಯವಾಗಲಿದೆ. ದೀಪಕ್ ಚಹಾರ್ ಡರ್ಬನ್‌ನಲ್ಲಿ ಮೊದಲ ಪಂದ್ಯಕ್ಕೆ ಲಭ್ಯವಿದ್ದಾರೆ. ಋತುರಾಜ್ ಗಾಯಕ್ವಾಡ್ ಅಥವಾ ಯಶಸ್ವಿ ಜೈಸ್ವಾಲ್ ಬದಲು ಸರಣಿಯ ಆರಂಭಿಕ ಪಂದ್ಯದಲ್ಲಿ ಆರಂಭಿಕ ಆಟಗಾರ ಗಿಲ್‌ಗೆ ಅವಕಾಶ ನೀಡುವ ನಿರೀಕ್ಷೆಯಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News