×
Ad

ಇತಿಹಾಸ ನಿರ್ಮಿಸಿದ ಭಾರತದ ಟೇಬಲ್ ಟೆನಿಸ್ ತಂಡ | 2024 ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ

Update: 2024-03-04 18:00 IST

Photo : PTI

ಹೊಸದಿಲ್ಲಿ : ಭಾರತದ ಪುರುಷ ಮತ್ತು ಮಹಿಳಾ ತಂಡಗಳು ತಮ್ಮ ವಿಶ್ವ ಶ್ರೇಯಾಂಕದ ಆಧಾರದ ಮೇಲೆ ಮೊದಲ ಬಾರಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಮೂಲಕ ಇತಿಹಾಸವನ್ನು ಬರೆದಿದೆ.

ಪ್ಯಾರಿಸ್ ಒಲಿಂಪಿಕ್ಸ್‌ಗೆ ಕೊನೆಯ ಅರ್ಹತಾ ಪಂದ್ಯವಾಗಿದ್ದ, ಕಳೆದ ತಿಂಗಳು ಬುಸಾನ್‌ನಲ್ಲಿ ನಡೆದ ವಿಶ್ವ ಟೀಮ್ ಚಾಂಪಿಯನ್‌ಶಿಪ್ ಫೈನಲ್‌ಗಳ ಬಳಿಕ ಶ್ರೇಯಾಂಕಗಳ ಆಧಾರದ ಮೇಲೆ ಅರ್ಹತೆ ಪಡೆದಿದೆ.

ಮಹಿಳೆಯರ ವಿಭಾಗದಲ್ಲಿ 13ನೇ ಶ್ರೇಯಾಂಕದಲ್ಲಿ ಭಾರತ, ಪೋಲೆಂಡ್ (12), ಸ್ವೀಡನ್ (15) ಮತ್ತು ಥಾಯ್ಲೆಂಡ್ ಪ್ಯಾರಿಸ್‌ ಒಲಿಂಪಿಕ್ ಗೆ ಅರ್ಹತೆ ಪಡೆದಿದೆ.

ಪುರುಷರ ತಂಡ ವಿಭಾಗದಲ್ಲಿ ಕ್ರೊಯೇಷಿಯಾ (12), ಭಾರತ (15), ಮತ್ತು ಸ್ಲೊವೇನಿಯಾ (11) ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಂಡಿದೆ.

"ಕೊನೆಗೂ… ಒಲಿಂಪಿಕ್ಸ್‌ನಲ್ಲಿ ಟೀಮ್ ಈವೆಂಟ್‌ಗೆ ಭಾರತ ತಂಡ ಅರ್ಹತೆ ಪಡೆಯಿತು. ನಾನು ಬಹಳ ದಿನಗಳಿಂದ ಈ ದಿನಕ್ಕಾಗಿ ಕಾಯುತ್ತಿದ್ದೆ. ಒಲಿಂಪಿಕ್ಸ್‌ನಲ್ಲಿ ಇದು ನನ್ನ ಐದನೇ ಪಾಲ್ಗೊಳ್ಳುವಿಕೆಯಾದರೂ, ನನಗಿದು ವಿಶೇಷವಾಗಿದೆ. ಐತಿಹಾಸಿಕವಾಗಿ ಅರ್ಹತೆ ಪಡೆದುಕೊಂಡ ನಮ್ಮ ಮಹಿಳಾ ತಂಡಕ್ಕೆ ವಂದನೆಗಳು!” ಎಂದು ಶರತ್ ಕಮಲ್ ಅವರು ಎಕ್ಸ್ ಪೋಸ್ಟ್ ಮೂಲಕ ಹೇಳಿದ್ದಾರೆ.

ಟೇಬಲ್ ಟೆನ್ನಿಸ್ ತಂಡವು ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿರುವುದು ಭಾರತೀಯ ಕ್ರೀಡಾ ಇತಿಹಾಸದಲ್ಲಿ ಒಂದು ಮೈಲಿಗಲ್ಲು ಎಂದೇ ಭಾವಿಸಲಾಗಿದೆ. 2008 ರ ಬೀಜಿಂಗ್ ಒಲಿಂಪಿಕ್ಸ್ ಬಳಿಕ ಗುಂಪು ಸ್ಪರ್ಧೆಯಲ್ಲಿ ಭಾರತವು ಮೊದಲ ಬಾರಿಗೆ ಸ್ಪರ್ಧಿಸಲಿದೆ.

ಪೂರಕ ಮಾಹಿತಿ : sportstar

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News