×
Ad

ಭಾರತದ ಕುಶ್ವಾಹ ಫಿಡೆ ರೇಟಿಂಗ್ ಗಳಿಸಿದ ಅತ್ಯಂತ ಕಿರಿಯ ಆಟಗಾರ

Update: 2025-12-04 21:54 IST

ಸರ್ವಜ್ಞ ಸಿಂಗ್ ಕುಶ್ವಾಹ |Photo Credit : X/Rakesh Kulkarni

ಹೊಸದಿಲ್ಲಿ: ಭಾರತದ ಸರ್ವಜ್ಞ ಸಿಂಗ್ ಕುಶ್ವಾಹ ಚೆಸ್ ಇತಿಹಾಸದಲ್ಲೇ ಅಧಿಕೃತ ಫಿಡೆ ರೇಟಿಂಗ್ ಗಳಿಸಿದ ಅತ್ಯಂತ ಕಿರಿಯ ಆಟಗಾರನಾಗಿದ್ದಾರೆ. ಅವರು ತನ್ನ ಮೂರು ವರ್ಷ ಏಳು ತಿಂಗಳು ಮತ್ತು 20 ದಿನಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದಾರೆ.

ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಕುಶ್ವಾಹ ಕೋಲ್ಕತಾದ ಅನೀಶ್ ಸರ್ಕಾರ್ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ. ಅವರು ಈ ದಾಖಲೆಯನ್ನು ಕಳೆದ ವರ್ಷದ ನವೆಂಬರ್‌ನಲ್ಲಿ ತನ್ನ ಮೂರು ವರ್ಷ, ಎಂಟು ತಿಂಗಳು ಮತ್ತು 19 ದಿನಗಳ ವಯಸ್ಸಿನಲ್ಲಿ ನಿರ್ಮಿಸಿದ್ದರು.

ಈಗ ನರ್ಸರಿ ಶಾಲೆಗೆ ಹೋಗುತ್ತಿರುವ ಕುಶ್ವಾಹ 1,572 ರ್ಯಾಪಿಡ್ ರೇಟಿಂಗ್ ಹೊಂದಿದ್ದಾರೆ.

‘‘ನಮ್ಮ ಮಗ ಫಿಡೆ ರೇಟಿಂಗ್ ಗಳಿಸಿದ ವಿಶ್ವದ ಅತ್ಯಂತ ಕಿರಿಯ ಚೆಸ್ ಆಟಗಾರನಾಗಿದ್ದಾನೆ ಎನ್ನುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಅವನು ಗ್ರಾಂಡ್‌ಮಾಸ್ಟರ್ ಆಗಬೇಕೆಂದು ನಾವು ಬಯಸುತ್ತೇವೆ’’ ಎಂದು ಕುಶ್ವಾಹನ ತಂದೆ ಸಿದ್ಧಾರ್ಥ ಸಿಂಗ್ ‘ಇಟಿವಿ ಭಾರತ್’ನೊಂದಿಗೆ ಮಾತನಾಡುತ್ತಾ ಹೇಳಿದರು.

ಫಿಡೆ ರ್ಯಾಂಕಿಂಗ್ ಗಳಿಸಬೇಕಾದರೆ, ಓರ್ವ ಆಟಗಾರ ಕನಿಷ್ಠ ಒಬ್ಬ ಅಂತರ್‌ರಾಷ್ಟ್ರೀಯ ಆಟಗಾರನನ್ನು ಸೋಲಿಸಬೇಕಾಗುತ್ತದೆ. ಕುಶ್ವಾಹ ಮಧ್ಯಪ್ರದೇಶ ಮತ್ತು ದೇಶದ ಇತರ ಭಾಗಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಇಂಥ ಮೂವರು ಆಟಗಾರರನ್ನು ಸೋಲಿಸಿದ್ದಾನೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News