×
Ad

ನಾಳೆ ಐಒಎ ಕಾರ್ಯಕಾರಿ ಮಂಡಳಿ ಸಭೆ

Update: 2024-09-25 21:46 IST

PC : X 

ಹೊಸದಿಲ್ಲಿ : ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ(ಐಒಎ) ಕಾರ್ಯಕಾರಿ ಮಂಡಳಿಯ ಸಭೆಯ ಕಾರ್ಯಸೂಚಿಯಲ್ಲಿ ಅಧ್ಯಕ್ಷೆ ಪಿ.ಟಿ. ಉಷಾ ನೀಡಿದ ಬೆದರಿಕೆ ಪತ್ರಗಳು, ಒಲಿಂಪಿಕ್ಸ್‌ ನಲ್ಲಿ ಉಂಟಾಗಿರುವ ಹೆಚ್ಚುವರಿ ಖರ್ಚುಗಳು ಸೇರಿದಂತೆ ಹಲವು ವಿವಾದಾತ್ಮಕ ಅಂಶಗಳನ್ನು ಸೇರಿಸಲಾಗಿದ್ದು, ಬಿಸಿ ಬಿಸಿ ಚರ್ಚೆ ನಿರೀಕ್ಷಿಸಲಾಗುತ್ತಿದೆ.

ಉಷಾ ಹಾಗೂ ಐಒಎ ಖಜಾಂಚಿ ಸಹದೇವ್ ಯಾದವ್ ನಡುವೆ ಹೆಚ್ಚುತ್ತಿರುವ ವಾಗ್ವಾದದ ಹಿನ್ನೆಲೆಯಲ್ಲಿ ಈ ಸಭೆ ನಡೆಯಲಿದೆ.

ಖಜಾಂಚಿ ಹುದ್ದೆಯನ್ನು ಹೊಂದುವ ತನ್ನ ಅರ್ಹತೆಯನ್ನು ಪ್ರಶ್ನಿಸಿ ಸಲ್ಲಿಸಿರುವ ದೂರಿನ ಆಧಾರದ ಮೇಲೆ ತನಗೆ ಶೋಕಾಸ್ ನೋಟಿಸ್ ನೀಡಿ ಘನತೆಗೆ ಕುಂದು ತಂದಿರುವ ಉಷಾ ವಿರುದ್ಧ ಮಾನಹಾನಿ ಮಾಡಿದ್ದಕ್ಕೆ ಕಾನೂನು ಕ್ರಮ ಜರುಗಿಸುವುದಾಗಿ ಯಾದವ್ ಮಂಗಳವಾರ ಎಚ್ಚರಿಕೆ ನೀಡಿದ್ದರು.

ಕಾರ್ಯಕಾರಿ ಮಂಡಳಿ ಸೇರಿಸಿರುವ 14 ಕಾರ್ಯಸೂಚಿ ಅಂಶಗಳಲ್ಲಿ ಅಧ್ಯಕ್ಷರು ಕಾಲ ಕಾಲಕ್ಕೆ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ನೀಡಿದ ಕಾನೂನುಬಾಹಿರ ಹಾಗೂ ಬೆದರಿಕೆ ಪತ್ರಗಳ ಕುರಿತ ಚರ್ಚೆಯನ್ನು ಒಳಗೊಂಡಿದೆ.

ಕಾರ್ಯಸೂಚಿಯಲ್ಲಿ ಒಲಿಂಪಿಕ್ಸ್ ಪ್ರಾಯೋಜಕತ್ವದ ವಿವರಗಳು ಒಳಗೊಂಡಿವೆ. ಅಧ್ಯಕ್ಷರ ಕೊಠಡಿ ನವೀಕರಣ ವೆಚ್ಚವೂ ಒಳಗೊಂಡಂತೆ ಪ್ಯಾರಿಸ್‌ ನಲ್ಲಿ ಮಾಡಲಾಗಿರುವ ಹೆಚ್ಚುವರಿ ಖರ್ಚು ಹಾಗೂ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ವಿವಿಧ ಜನರಿಗೆ ಪಾಸ್‌ಗಳು ಹಾಗೂ ಮಾನ್ಯತೆ ಕಾರ್ಡ್ ವಿತರಿಸಿರುವ ಕುರಿತು ಚರ್ಚೆ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News