×
Ad

ಈ ಬಾರಿಯ ಐಪಿಎಲ್ ನಲ್ಲಿ 2 ಹೊಸ ನಿಯಮ ಜಾರಿ

Update: 2024-03-21 23:48 IST

ಹೊಸದಿಲ್ಲಿ: ಚೆನ್ನೈನಲ್ಲಿ ಶುಕ್ರವಾರ ಆರಂಭವಾಗಲಿರುವ ಐಪಿಎಲ್ ಟೂರ್ನಿಯಲ್ಲಿ ಎರಡು ಹೊಸ ನಿಯಮಗಳು ಜಾರಿಗೆ ಬರಲಿವೆ. ಬೌಲರ್ ಪ್ರತಿ ಓವರ್‌ ಗೆ ಎರಡು ಬೌನ್ಸರ್ ಎಸೆಯಲು ಅನುಮತಿ ನೀಡಲಾಗಿದೆ. ಅಂಪೈರ್ ತೀರ್ಪು ಪುನರ್ ಪರಿಶೀಲನ ಪದ್ಧತಿಗೆ ಮತ್ತಷ್ಟು ನಿಖರತೆ, ವೇಗವನ್ನು ತರಲು ಸ್ಮಾರ್ಟ್ ರಿಪ್ಲೇ ಸಿಸ್ಟಮ್ ಅನ್ನು ಅನುಷ್ಠಾನಕ್ಕೆ ತರಲಾಗುತ್ತದೆ.

ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಕೆರಳಿಸಲು ಐಪಿಎಲ್-2024ಕ್ಕೆ ಈ ಎರಡು ನಿಯಮಗಳಿಗೆ ಬಿಸಿಸಿಐ ಅನುಮೋದನೆ ನೀಡಿದೆ.

ಕಳೆದ ಋತುವಿನಲ್ಲಿ ಪರಿಚಯಿಸಲಾದ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಈ ಬಾರಿ ಉಳಿಸಿಕೊಳ್ಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News