×
Ad

ಐಪಿಎಲ್‌ 2024 | ರೋಚಕ ಪಂದ್ಯದಲ್ಲಿ ಸೋತ ಮುಂಬೈ ಇಂಡಿಯನ್ಸ್

Update: 2024-03-27 23:24 IST

Photo :x/@IPL

ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ನ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು 31 ರನ್‌ ಗಳ ಐತಿಹಾಸಿಕ ಗೆಲುವು ದಾಖಲಿಸಿದೆ.

ಐಪಿಎಲ್‌ ಇತಿಹಾಸದಲ್ಲೇ ಗರಿಷ್ಠ ರನ್‌ ಬಾರಿಸಿದ ಸನ್ ರೈಸರ್ಸ್ ಹೈದರಾಬಾದ್ ತಂಡವು ಮುಂಬೈಗೆ  278 ರನ್‌ ಗಳ ಬೃಹತ್‌ ಗುರಿ ನೀಡಿತ್ತು. ಈ ಕಠಿಣ ಗುರಿ ಬೆನ್ನಟ್ಟಿದ ಮುಂಬೈ ತಂಡವು ಕೊನೆಯ ಹಂತದವರೆಗೂ ಪೈಪೋಟಿ ನೀಡಿ ಸೋಲನ್ನು ಅನುಭವಿಸಿತು.

ಮುಂಬೈ ಇಂಡಿಯನ್ಸ್‌ ಪರ ತಿಲಕ್‌ ವರ್ಮಾ ಸ್ಪೋಟಕ 64 ,ಟಿಮ್‌ ಡೇವಿಡ್‌ 42 ರನ್‌ ಬಾರಿಸಿದರೂ ಕೂಡ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ನಿಗಧಿತ 20 ಓವರ್‌ ಪೂರ್ಣಗೊಳಿಸಿ 246 ರನ್‌ ಪೇರಿಸಿ ಇನ್ನಿಂಗ್ಸ್‌ ಮುಗಿಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News