×
Ad

ಕೋಲ್ಕತ ವಿರುದ್ಧದ ಪಂದ್ಯದಲ್ಲಿ ಲ್ಯಾವೆಂಡರ್ ಜರ್ಸಿ ಧರಿಸಿ ಆಡಲಿರುವ ಗುಜರಾತ್

Update: 2024-05-09 21:38 IST

Photo : twitter/gujarat_titans

ಅಹ್ಮದಾಬಾದ್ : ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ, ಮೇ 13ರಂದು ತವರಿನಲ್ಲಿ ನಡೆಯಲಿರುವ ತನ್ನ ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಲ್ಯಾವೆಂಡರ್ ಜರ್ಸಿಯನ್ನು ಧರಿಸಿ ಆಡಲಿದೆ. ಅಂದು ಅಹ್ಮದಾಬಾದ್ ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವು ಕೋಲ್ಕತ ನೈಟ್ ರೈರ್ಡ್ ತಂಡವನ್ನು ಎದುರಿಸಲಿದೆ.

‘‘ಕ್ಯಾನ್ಸರ್ ರೋಗಿಗಳಿಗೆ ಬೆಂಬಲ ಸೂಚಿಸಲು’’ ಗುಜರಾತ್ ಟೈಟಾನ್ಸ್ ಲ್ಯಾವೆಂಡರ್ ಜರ್ಸಿಯನ್ನು ಧರಿಸುತ್ತಿರುವುದು ಇದು ಸತತ ಎರಡನೇ ವರ್ಷವಾಗಿದೆ.

‘‘ಕ್ಯಾನ್ಸರ್ ನಿಂದ ಬಳಲುತ್ತಿರುವ ರೋಗಿಗಳ ಚೇತರಿಕೆಯಲ್ಲಿ, ರೋಗವನ್ನು ಆರಂಭದಲ್ಲೇ ಪತ್ತೆಹಚ್ಚುವುದು ಮತ್ತು ಉತ್ತಮ ಚಿಕಿತ್ಸೆ ಮಹತ್ವದ ಪಾತ್ರ ವಹಿಸುತ್ತದೆ ಎನ್ನುವುದನ್ನು ಮನದಟ್ಟು ಮಾಡಿಸುವುದಕ್ಕಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ’’ ಎಂದು ತಂಡವು ಗುರುವಾರ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ನ 2023ರ ಆವೃತ್ತಿಯಲ್ಲಿ, ಗುಜರಾತ್ ಟೈಟಾನ್ಸ್ ತಂಡವು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ವಿಶೇಷ ಜರ್ಸಿ ಧರಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News