ಐಪಿಎಲ್-2025 | ಗುಜರಾತ್ ಟೈಟಾನ್ಸ್ ತಂಡದ ಕೋಚಿಂಗ್ ಬಳಗಕ್ಕೆ ಮ್ಯಾಥ್ಯೂ ವೇಡ್ ಸೇರ್ಪಡೆ
ಮ್ಯಾಥ್ಯೂ ವೇಡ್ | PC : X
ಹೊಸದಿಲ್ಲಿ: 2025ರ ಆವೃತ್ತಿಯ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆರಂಭಕ್ಕೆ ಮೊದಲು ಆಸ್ಟ್ರೇಲಿಯದ ಮಾಜಿ ವಿಕೆಟ್‌ಕೀಪರ್ ಮ್ಯಾಥ್ಯೂ ವೇಡ್ ಅವರು ಗುಜರಾತ್ ಟೈಟಾನ್ಸ್ ತಂಡದ ಸಹಾಯಕ ಕೋಚ್ ಆಗಿ ನೇಮಕಗೊಂಡಿದ್ದಾರೆ.
ವೇಡ್ 2022 ಹಾಗೂ 2024 ಎರಡು ಋತುಗಳಲ್ಲಿ ಗುಜರಾತ್ ಟೈಟಾನ್ಸ್ ಪರ ಆಡಿದ್ದರು. ಆದರೆ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದ ನಂತರ ಐಪಿಎಲ್ ಮೆಗಾ ಹರಾಜಿನಲ್ಲಿ ಸೇರ್ಪಡೆಯಾಗಿರಲಿಲ್ಲ.
‘ಚಾಂಪಿಯನ್.ಫೈಟರ್. ಇದೀಗ ನಮ್ಮ ಸಹಾಯಕ ಕೋಚ್! ಮ್ಯಾಥ್ಯೂವೇಡ್‌ಗೆ ಗುಜರಾತ್ ಟೈಟಾನ್ಸ್ ತಂಡಕ್ಕೆ ಸ್ವಾಗತ’ ಎಂದು ಗುಜರಾತ್ ಟೈಟಾನ್ಸ್ ಎಕ್ಸ್‌ನಲ್ಲಿ ಬರೆದಿದೆ.
ವೇಡ್ ಗುಜರಾತ್ ಪರ 12 ಐಪಿಎಲ್ ಪಂದ್ಯಗಳಲ್ಲಿ ಆಡಿದ್ದಾರೆ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಗುಜರಾತ್ 2022ರಲ್ಲಿ ಪ್ರಶಸ್ತಿ ಗೆದ್ದಾಗ ಆ ತಂಡದ ಸದಸ್ಯರಾಗಿದ್ದರು.
ಇದೀಗ ಗುಜರಾತ್ ತಂಡದ ಕೋಚಿಂಗ್ ತಂಡದ ಸದಸ್ಯರಾಗಿರುವ ವೇಡ್, ಮುಖ್ಯ ಕೋಚ್ ಆಶೀಶ್ ನೆಹ್ರಾ, ಬ್ಯಾಟಿಂಗ್ ಕೋಚ್ ಪಾರ್ಥಿವ್ ಪಟೇಲ್ ಹಾಗೂ ಸಹಾಯಕ ಕೋಚ್‌ಗಳಾದ ಆಶೀಶ್ ಕಪೂರ್ ಹಾಗೂ ನರೇಂದ್ರ ನೇಗಿ ಅವರೊಂದಿಗೆ ಸೇರಿದ್ದಾರೆ.