×
Ad

ಐಪಿಎಲ್ 2025 ಹರಾಜು | ಭಾರತದ ಅಗ್ರ 5 ದುಬಾರಿ ಆಟಗಾರರು

Update: 2024-11-26 21:42 IST

PC : @IPL

ಹೊಸದಿಲ್ಲಿ: ಸೌದಿ ಅರೇಬಿಯದ ಜಿದ್ದಾದಲ್ಲಿ ನಡೆದಿರುವ ಐಪಿಎಲ್-2025 ಮೆಗಾ ಹರಾಜಿನಲ್ಲಿ ಫ್ರಾಂಚೈಸಿಗಳ ನಡುವೆ ತೀವ್ರ ಬಿಡ್ಡಿಂಗ್ ವಾರ್ ನಡೆದಿದ್ದು, ಅಗ್ರ ಪ್ರತಿಭಾವಂತ ಆಟಗಾರರನ್ನು ಪಡೆಯಲು ಫ್ರಾಂಚೈಸಿಗಳು ದಾಖಲೆ ಮೊತ್ತವನ್ನು ವಿನಿಯೋಗಿಸಿವೆ. ರಿಷಭ್ ಪಂತ್ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದು, 27 ಕೋಟಿ ರೂ.ಗೆ ಲಕ್ನೊ ಸೂಪರ್ ಜಯಂಟ್ಸ್ ಪಾಲಾದರು.

ಪಂತ್ ಇದೀಗ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಎರಡು ದಿನಗಳ ಆಟಗಾರರ ಹರಾಜಿನ ವೇಳೆ 10 ಫ್ರಾಂಚೈಸಿಗಳು 182 ಆಟಗಾರರನ್ನು ತಮ್ಮತ್ತ ಸೆಳೆಯಲು ಒಟ್ಟು 639.15 ಕೋಟಿ ರೂ. ವ್ಯಯಿಸಿವೆ. ಮೆಗಾ ಹರಾಜಿನ ವೇಳೆ 395 ಆಟಗಾರರು ಮಾರಾಟವಾಗದೆ ಉಳಿದರು.

► ಐಪಿಎಲ್-2025ರ ಹರಾಜಿನ ವೇಳೆ ಅತಿಹೆಚ್ಚು ಮೊತ್ತಕ್ಕೆ ಸಹಿ ಹಾಕಿದ ಭಾರತದ ಅಗ್ರ-ಐದು ದುಬಾರಿ ಆಟಗಾರರ ಪಟ್ಟಿ ಇಂತಿದೆ.

ರಿಷಭ್ ಪಂತ್-ಲಕ್ನೊ ಸೂಪರ್ ಜಯಂಟ್ಸ್-27 ಕೋಟಿ ರೂ.

ಶ್ರೇಯಸ್ ಅಯ್ಯರ್-ಪಂಜಾಬ್ ಕಿಂಗ್ಸ್-26.75 ಕೋಟಿ ರೂ.

ವೆಂಕಟೇಶ್ ಅಯ್ಯರ್-ಕೋಲ್ಕತಾ ನೈಟ್ ರೈಡರ್ಸ್-23.75 ಕೋಟಿ ರೂ.

ಅರ್ಷದೀಪ್ ಸಿಂಗ್-ಪಂಜಾಬ್ ಕಿಂಗ್ಸ್-18.00 ಕೋಟಿ ರೂ.

ಯಜುವೇಂದ್ರ ಚಹಾಲ್-ಪಂಜಾಬ್ ಕಿಂಗ್ಸ್-18.00 ಕೋಟಿ ರೂ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News