×
Ad

ಮುಂಬೈ ವಿರುದ್ಧ ಆಕರ್ಷಕ ಪ್ರದರ್ಶನ: 3 ವರ್ಷಗಳ ಹಿಂದಿನ ಕರುಣ್ ನಾಯರ್ ಪೋಸ್ಟ್ ವೈರಲ್

Update: 2025-04-14 23:09 IST

Photo Courtesy : IPL

ಹೊಸದಿಲ್ಲಿ: ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ರವಿವಾರ ನಡೆದ ಐಪಿಎಲ್ ಪಂದ್ಯದ ವೇಳೆ 40 ಎಸೆತಗಳಲ್ಲಿ ಆಕರ್ಷಕ 89 ರನ್ ಗಳಿಸಿದ ಕರುಣ್ ನಾಯರ್ ಐಪಿಎಲ್ ಗೆ 3 ವರ್ಷಗಳ ನಂತರ ಭರ್ಜರಿ ಪುನರಾಗಮನ ಮಾಡಿದ್ದರು.

ಕರ್ಣ್ ಶರ್ಮಾರ(3-36)ನಿರ್ಣಾಯಕ ಬೌಲಿಂಗ್ ಸ್ಪೆಲ್ ನೆರವಿನಿಂದ ಮುಂಬೈ ತಂಡವು ಡೆಲ್ಲಿ ತಂಡವನ್ನು 12 ರನ್ನಿಂದ ಸೋಲಿಸಿದೆ.

ನಾಯರ್ ಅವರ 89 ರನ್ ಇನಿಂಗ್ಸ್ನಲ್ಲಿ 12 ಬೌಂಡರಿ ಹಾಗೂ 5 ಸಿಕ್ಸರ್ಗಳಿದ್ದವು. ಮುಂಬೈ ತಂಡದ ಪ್ರಮುಖ ಬೌಲರ್ಗಳಾದ ಜಸ್ಪ್ರಿತ್ ಬುಮ್ರಾ, ಟ್ರೆಂಟ್ ಬೌಲ್ಟ್ ಹಾಗೂ ಹಾರ್ದಿಕ್ ಪಾಂಡ್ಯರನ್ನು ಗುರಿಯಾಗಿಸಿ ನಾಯರ್ ಬ್ಯಾಟ್ ಬೀಸಿದ್ದರು.

2022ರಲ್ಲಿ ನಾಯರ್ ಸಾಮಾಜಿಕ ಮಾಧ್ಯಮದಲ್ಲಿ ಮಾಡಿರುವ ಪೋಸ್ಟ್ವೊಂದು ಇದೀಗ ವೈರಲ್ ಆಗಿದೆ. ‘ಡಿಯರ್ ಕ್ರಿಕೆಟ್, ನನಗೆ ಮತ್ತೊಂದು ಅವಕಾಶ ನೀಡು’ ಎಂದು ಬರೆದಿದ್ದ ಆ ಪೋಸ್ಟ್ ಮುಂಬೈ ವಿರುದ್ಧ ನಾಯರ್ ಪ್ರದರ್ಶನದ ನಂತರ ವೈರಲ್ ಆಗಿದೆ.

ಗೆಲ್ಲಲು 206 ರನ್ ಚೇಸ್ ಮಾಡಿದ ಡೆಲ್ಲಿ ತಂಡವು ನಾಯರ್ ವಿಕೆಟ್ ಒಪ್ಪಿಸಿದಾಗ 2 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು. ಆನಂತರ ಕುಸಿತದ ಹಾದಿ ಹಿಡಿದ ಡೆಲ್ಲಿ ತಂಡವು ತನ್ನ ತವರು ಮೈದಾನ ಫಿರೋಝ್ ಶಾ ಕೋಟ್ಲಾದಲ್ಲಿ 193 ರನ್ ಗಳಿಸಿ ಆಲೌಟಾಯಿತು.

‘‘ಗೆಲುವು ಯಾವಾಗಲೂ ವಿಶೇಷ. ಅತ್ಯಂತ ಪ್ರಮುಖವಾಗಿ ಇಂತಹ ಪಂದ್ಯಗಳಲ್ಲಿ ನೀವು ಹೋರಾಡುತ್ತಲೇ ಇರಬೇಕು’’ ಎಂದು ಮುಂಬೈ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಹೇಳಿದರು.

ಡೆಲ್ಲಿ ತಂಡವು 4 ಪಂದ್ಯಗಳ ನಂತರ ಮೊದಲ ಸೋಲು ಕಂಡಿದ್ದರೆ, ಮುಂಬೈ 6 ಪಂದ್ಯಗಳಲ್ಲಿ 2ನೇ ಜಯ ದಾಖಲಿಸಿತು. 19ನೇ ಓವರ್ನಲ್ಲಿ ಮೂರು ಎಸೆತಗಳಲ್ಲಿ ಮೂವರು ಆಟಗಾರರು ರನೌಟ್ಆಗುವ ಮೂಲಕ ಪಂದ್ಯವು ನಾಟಕೀಯವಾಗಿ ಕೊನೆಗೊಂಡಿತು.

ಡೆಲ್ಲಿ ರನ್ ಗಳಿಸುವ ಮೊದಲೇ ಮೊದಲ ವಿಕೆಟ್ ಕಳೆದುಕೊಂಡಾಗ 33ರ ಹರೆಯದ ನಾಯರ್, ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದರು. 7 ವರ್ಷಗಳ ನಂತರ ಮೊದಲ ಐಪಿಎಲ್ನಲ್ಲಿ ತನ್ನ ಮೊದಲ ಅರ್ಧಶತಕವನ್ನು 22 ಎಸೆತಗಳಲ್ಲಿ ಪೂರೈಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News