×
Ad

ಮಾರ್ಚ್‌ 14ರಿಂದ ಐಪಿಎಲ್ ಆರಂಭ; ಮುಂದಿನ 3 ಆವೃತ್ತಿಗಳ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

Update: 2024-11-22 11:33 IST

Photo credit: PTI

ಹೊಸದಿಲ್ಲಿ: ಮುಂದಿನ ಮೂರು ಐಪಿಎಲ್ ಆವೃತ್ತಿಗಳ ವೇಳಾಪಟ್ಟಿಯನ್ನು ಪ್ರಕಟಿಸುವ ಮೂಲಕ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಮಹತ್ವದ ನಿರ್ಧಾರ ಕೈಗೊಂಡಿದೆ.

ಟೂರ್ನಮೆಂಟ್ ಹತ್ತಿರವಾಗುತ್ತಿದ್ದಂತೆ ವೇಳಾಪಟ್ಟಿಯನ್ನು ಪ್ರಕಟಿಸುತ್ತಿದ್ದ ಸಾಮಾನ್ಯ ಪದ್ಧತಿಗೆ ತಿಲಾಂಜಲಿ ನೀಡಿರುವ ಬಿಸಿಸಿಐ, ಮುಂಚಿತವಾಗಿಯೇ ಮೂರು ಐಪಿಎಲ್ ಸೀಸನ್‌ ಗಳ ವೇಳಾಪಟ್ಟಿ ಪ್ರಕಟಿಸಿದೆ.

2025ರ ಐಪಿಎಲ್‌ ಟೂರ್ನಮೆಂಟ್ ಮಾರ್ಚ್ 14ರಿಂದ ಪ್ರಾರಂಭಗೊಂಡು, ಮೇ 25ರಂದು ಮುಕ್ತಾಯಗೊಳ್ಳಲಿದೆ. ಇದೇ ರೀತಿ 2026 ಮತ್ತು 2027ನೇ ಐಪಿಎಲ್ ಆವೃತ್ತಿಗೂ ಬಿಸಿಸಿಐ ವೇಳಾಪಟ್ಟಿ ಪ್ರಕಟಿಸಿದೆ.

2026ನೇ ಸಾಲಿನ ಐಪಿಎಲ್ ಮಾರ್ಚ್ 15ರಿಂದ ಪ್ರಾರಂಭಗೊಂಡು, ಮೇ 31ರಂದು ಮುಕ್ತಾಯಗೊಳ್ಳಲಿದ್ದರೆ, 2027ರ ಐಪಿಎಲ್ ಟೂರ್ನಮೆಂಟ್ ಮಾರ್ಚ್ 14ರಿಂದ ಪ್ರಾರಂಭಗೊಂಡು, ಮೇ 30ರಂದು ಅಂತ್ಯಗೊಳ್ಳಲಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News