×
Ad

ಐಪಿಎಲ್ |ರಾಜಸ್ಥಾನ್ ರಾಯಲ್ಸ್ ತಂಡದ ನೂತನ ಕೋಚ್ ಆಗಿ ಕುಮಾರ್ ಸಂಗಕ್ಕರ ನೇಮಕ

Update: 2025-11-17 16:21 IST

ಕುಮಾರ್ ಸಂಗಕ್ಕರ (Photo: PTI)

ಹೊಸದಿಲ್ಲಿ: ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಶ್ರೀಲಂಕಾ ತಂಡದ ಮಾಜಿ ನಾಯಕ ಕುಮಾರ್ ಸಂಗಕ್ಕರ ನೇಮಕವಾಗಿದ್ದಾರೆ. ಆ ಮೂಲಕ, ಹಿಂದಿನ ಐಪಿಎಲ್ ಋತುವಿನಲ್ಲಿ ಕ್ರಿಕೆಟ್ ನಿರ್ದೇಶಕರಾಗಿದ್ದ ಅವರು, ಈ ಬಾರಿ ಎರಡೆರಡು ಹುದ್ದೆಗಳನ್ನು ನಿಭಾಯಿಸಲಿದ್ದಾರೆ. 

2025ನೇ ಆವೃತಿಯಲ್ಲಿ ತಂಡದ ಮುಖ್ಯ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಅವರು ಈ ವರ್ಷದ ಆಗಸ್ಟ್‌ನಲ್ಲಿ ಫ್ರಾಂಚೈಸಿಯನ್ನು ತೊರೆದಿದ್ದರು. 2021ರಿಂದ 2024ರವರೆಗೆ 48 ವರ್ಷದ ಕುಮಾರ್ ಸಂಗಕ್ಕರ ಅವರೇ ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಆಗಿದ್ದರು. ಆದರೆ, ಕಳೆದ ಋತುವಿನ ಐಪಿಎಲ್ ಟೂರ್ನಿ ಮುಕ್ತಾಯಗೊಂಡ ನಂತರ, ರಾಹುಲ್ ದ್ರಾವಿಡ್ ಇನ್ನು ತಂಡದ ಮುಖ್ಯ ಕೋಚ್ ಪಾತ್ರದಲ್ಲಿ ಮುಂದುವರಿಯುವುದಿಲ್ಲ ಎಂದು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ದೃಢಪಡಿಸಿತ್ತು. 

2025ರಲ್ಲಿ ರಾಜಸ್ಥಾನ ತಂಡ ಆಡಿರುವ 14 ಪಂದ್ಯಗಳಲ್ಲಿ 4ರಲ್ಲಿ ಮಾತ್ರ ಗೆದ್ದು 9ನೇ ಸ್ಥಾನದಲ್ಲಿ ಟೂರ್ನಿಯನ್ನು ಕೊನೆಗೊಳಿಸಿತ್ತು. 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News