×
Ad

IPL 2026 ಟ್ರೇಡ್‌ ಪಟ್ಟಿ: ತಂಡಗಳನ್ನು ಬಲಪಡಿಸಿಕೊಂಡ ದಿಲ್ಲಿ, ಚೆನ್ನೈ, ಮುಂಬೈ

ಅಚ್ಚರಿ ಮೂಡಿಸಿದ ಶಮಿ, ರಾಣಾ, ಮಾರ್ಕಂಡೆ ಹರಾಜು ಮೊತ್ತ

Update: 2025-11-15 16:57 IST

Photo Credit : X

ಹೊಸದಿಲ್ಲಿ: ಐಪಿಎಲ್ 2026ರ ಋತುವಿನ ಎಲ್ಲ ತಂಡಗಳ ಆಟಗಾರರ ಸಂಪೂರ್ಣ ʼರಿಟೈನ್ʼ ಪಟ್ಟಿ ಬಿಡುಗಡೆಯಾಗಿದೆ. ದಿಲ್ಲಿ, ಮುಂಬೈ ಹಾಗೂ ಚೆನ್ನೈ ಪ್ರಮುಖ ಆಟಗಾರರನ್ನು ಖರೀದಿಸುವ ಮೂಲಕ ತಮ್ಮ ತಂಡಗಳನ್ನು ಬಲಿಷ್ಠಗೊಳಿಸಿಕೊಂಡಿವೆ. ಮತ್ತೊಂದೆಡೆ ಮುಹಮ್ಮದ್ ಶಮಿ, ನಿತೀಶ್ ರಾಣಾ, ಮಾರ್ಕಂಡೆ ಪಡೆದಿರುವ ಹರಾಜು ಮೊತ್ತ ಅಚ್ಚರಿಗೆ ಕಾರಣವಾಗಿದೆ.

ಆಟಗಾರರ ʼರಿಟೈನ್ʼ ಪಟ್ಟಿ ಈ ಕೆಳಗಿನಂತಿದೆ:

ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜಾರನ್ನು ಉಭಯ ತಂಡಗಳು ಪರಸ್ಪರ ವಿನಿಮಯ ಮಾಡಿಕೊಂಡಿವೆ. ಈ ಇಬ್ನರು ಆಟಗಾರರು ಕ್ರಮವಾಗಿ 18 ಕೋಟಿ ರೂ. ಹಾಗೂ 14 ಕೋಟಿ ರೂ.ಗೆ ಮಾರಾಟವಾಗಿದ್ದಾರೆ.

ರವೀಂದ್ರ ಜಡೇಜಾರೊಂದಿಗೆ ಸ್ಯಾಮ್ ಕುರಿಯನ್ ಕೂಡಾ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ವಿನಿಮಯಗೊಂಡಿದ್ದಾರೆ.

ಲಕ್ನೊ ಸೂಪರ್ ಜೈಂಟ್ಸ್ ತಂಡದಿಂದ ಮುಂಬೈ ಇಂಡಿಯನ್ಸ್ ತಂಡಕ್ಕೆ ವಿನಿಮಯಗೊಂಡಿರುವ ಶಾರ್ದೂಲ್ ಠಾಕೂರ್, 2 ಕೋಟಿ ರೂ.ಗೆ ಮಾರಾಟವಾಗಿದ್ದಾರೆ.

ಗುಜರಾತ್ ಟೈಟನ್ಸ್ ತಂಡದ ಶೆರ್ಫೇನ್ ರುದರ್‌ಫೋರ್ಡ್ ಮುಂಬೈ ಇಂಡಿಯನ್ಸ್ ತಂಡಕ್ಕೆ ವಿನಿಮಯಗೊಂಡಿದ್ದು, 2.6 ಕೋಟಿ ರೂ.ಗೆ ಮಾರಾಟವಾಗಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ಅರ್ಜುನ್ ತೆಂಡೂಲ್ಕರ್ ಲಕ್ನೊ ಸೂಪರ್ ಜೈಂಟ್ಸ್ ತಂಡಕ್ಕೆ ವಿನಿಮಯವಾಗಿದ್ದು, 30 ಲಕ್ಷ ರೂ.ಗೆ ಮಾರಾಟವಾಗಿದ್ದಾರೆ.

ಸನ್‌ರೈಸರ್ಸ್ ಹೈದರಾಬಾದ್ ತಂಡದ ಮುಹಮ್ಮದ್ ಶಮಿ ಲಕ್ನೊ ಸೂಪರ್ ಜೈಂಟ್ಸ್ ತಂಡಕ್ಕೆ ವಿನಿಮಯವಾಗಿದ್ದು, 10 ಕೋಟಿ ರೂ.ಗೆ ಮಾರಾಟವಾಗಿದ್ದಾರೆ.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಯಾಂಕ್ ಮಾರ್ಕಂಡೆ ಮುಂಬೈ ಇಂಡಿಯನ್ಸ್ ತಂಡಕ್ಕೆ ವಿನಿಮಯವಾಗಿದ್ದು, 30 ಲಕ್ಷ ರೂ.ಗೆ ಮಾರಾಟವಾಗಿದ್ದಾರೆ.

ರಾಜಸ್ಥಾನ್ ರಾಯಲ್ಸ್ ತಂಡದ ನಿತೀಶ್ ರಾಣಾ ದಿಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ವಿನಿಮಯಗೊಂಡಿದ್ದು, 4.6 ಕೋಟಿ ರೂ.ಗೆ ಮಾರಾಟವಾಗಿದ್ದಾರೆ.

ದಿಲ್ಲಿ ಕ್ಯಾಪಿಟಲ್ಸ್ ತಂಡದ ಡೊನೊವನ್ ಫೆರೀರಾ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ವಿನಿಮಯವಾಗಿದ್ದು, ಒಂದು ಕೋಟಿ ರೂ.ಗೆ ಮಾರಾಟವಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News