×
Ad

ಐಪಿಎಲ್-2025 ವೇಳಾಪಟ್ಟಿ ಪ್ರಕಟ

Update: 2025-02-17 10:43 IST

PC : X 

ಹೊಸದಿಲ್ಲಿ: ಹದಿನೆಂಟನೇ ಆವೃತ್ತಿಯ ಐಪಿಎಲ್ ಟೂರ್ನಿಯು ಮಾರ್ಚ್ 22ರಂದು ಕೋಲ್ಕತಾದ ಈಡನ್‌ ಗಾರ್ಡನ್ಸ್‌ನಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಮುಖಾಮುಖಿಯೊಂದಿಗೆ ಆರಂಭವಾಗಲಿದೆ.

2024ರ ಐಪಿಎಲ್ ಚಾಂಪಿಯನ್ ಕೆಕೆಆರ್‌ ನ ತವರು ಮೈದಾನ ಈಡನ್‌ ಗಾರ್ಡನ್ಸ್‌ ನಲ್ಲೇ ಮೇ 25ರಂದು ಫೈನಲ್ ಪಂದ್ಯ ನಡೆಯಲಿದೆ. ಈಡನ್ ಮೈದಾನದಲ್ಲಿ ಮೇ 23ರಂದು ಕ್ವಾಲಿಫೈಯರ್-2 ನಡೆಯಲಿದೆ.

ಇತರ ಎರಡು ಪ್ಲೇ ಆಫ್ ಪಂದ್ಯಗಳಾದ-ಕ್ವಾಲಿಫೈಯರ್-1 ಹಾಗೂ ಎಲಿಮಿನೇಟರ್ ಕ್ರಮವಾಗಿ ಮೇ 20 ಹಾಗೂ 21ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ.

ಈ ಬಾರಿ ಒಟ್ಟು 74 ಪಂದ್ಯಗಳು 65 ದಿನಗಳ ಕಾಲ ನಡೆಯಲಿದೆ. 13 ನಗರಗಳಲ್ಲಿ ಪಂದ್ಯಗಳು ನಡೆಯುತ್ತವೆ. ಮಧ್ಯಾಹ್ನದ ಪಂದ್ಯಗಳು 3:30ಕ್ಕೆ ಹಾಗೂ ರಾತ್ರಿ ಪಂದ್ಯಗಳು 7:30ಕ್ಕೆ ಆರಂಭವಾಗಲಿದೆ.




 



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News