ಮೇ17 ರಿಂದ ಐಪಿಎಲ್ ಪಂದ್ಯಾವಳಿ ಪುನಾರಾರಂಭ
Update: 2025-05-12 22:39 IST
PC : @IPL
ಮುಂಬೈ: ಐಪಿಎಲ್ 2025 ಪಂದ್ಯಗಳು ಮೇ 17 ರಂದು ಪುನರಾರಂಭಗೊಳ್ಳಲಿದೆ.
ಈ ಬಗ್ಗೆ ಅಧಿಕೃತವಾಗಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಇಂಡಿಯನ್ ಪ್ರೀಮಿಯರ್ ಲೀಗ್, “ಲೀಗ್-ಹಂತದ ಪಂದ್ಯಗಳನ್ನು 6 ಸ್ಥಳಗಳಲ್ಲಿ ಆಡಲಾಗುತ್ತದೆ. ಬಹುನಿರೀಕ್ಷಿತ ಫೈನಲ್ ಪಂದ್ಯ ಜೂನ್ 3 ರಂದು ನಡೆಯಲಿದೆ”, ಎಂದು ಪೋಸ್ಟ್ ಮಾಡಿದೆ.
ಪಹಲ್ಗಾಮ್ ದಾಳಿಯ ಬಳಿಕ ಭಾರತ ಪಾಕಿಸ್ತಾನದ ನಡುವೆ ಯುದ್ಧದ ಸನ್ನಿವೇಶ ಉಂಟಾದ ಬಳಿಕ ಐಪಿಎಲ್ ಪಂದ್ಯಗಳನ್ನು ಒಂದುವಾರದ ಅವಧಿಗೆ ಮುಂದೂಡಲಾಗಿತ್ತು.