×
Ad

IPL ಮೆಗಾ ಹರಾಜು | 26.75 ಕೋಟಿ ರೂ.ಗೆ ಪಂಜಾಬ್ ಪಾಲಾದ ಶ್ರೇಯಸ್‌ ಅಯ್ಯರ್

Update: 2024-11-24 16:22 IST

PC : BCCI

ಜಿದ್ದಾ (ಸೌದಿ ಅರೇಬಿಯ) : ಸೌದಿ ಅರೇಬಿಯಾದ ಜಿದ್ದಾದಲ್ಲಿ ನಡೆಯುತ್ತಿರುವ ಐಪಿಎಲ್‌ ಮೆಗಾ ಹರಾಜಿನಲ್ಲಿ ಭಾರತದ ಬ್ಯಾಟರ್, ಕಳೆದ ಬಾರಿಯ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕರಾಗಿದ್ದ ಶ್ರೇಯಸ್ ಅಯ್ಯರ್ ಅವರು 26.75 ಕೋಟಿ ರೂ.ಗೆ ಪಂಜಾಬ್ ಪಾಲಾದರು.

ರೋಚಕವಾಗಿ ನಡೆದ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ ಹಾಗೂ ಪಂಜಾಬ್ ತಂಡಗಳು ತೀವ್ರ ಪೈಪೋಟಿ ನಡೆಸಿತು. ಶ್ರೇಯಸ್ ಅಯ್ಯರ್ ಮೂಲ ಬೆಲೆ 2 ಕೋಟಿ ರೂ. ಇತ್ತು.

26.75 ಕೋಟಿ ರೂ. ಪಡೆಯುವ ಮೂಲಕ ಮಿಚೆಲ್ ಸ್ಟಾರ್ಕ್ ಹೆಸರಿನಲ್ಲಿದ್ದ ಅತೀ ಹೆಚ್ಚು ಬೆಲೆಗೆ ಐಪಿಎಲ್ ನಲ್ಲಿ ಹರಾಜಾದ ಆಟಗಾರ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಶ್ರೇಯಸ್ ಬರೆದುಕೊಂಡರು.

ಹರಾಜುಗಾರ್ತಿ ಮಲ್ಲಿಕಾ ಸಾಗರ್‌ ಅವರು ಹರಾಜು ನಡೆಸಿಕೊಟ್ಟರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News