×
Ad

ಈ ಬಾರಿಯಾದರೂ ಕಪ್ ನಮ್ದೇ ಆಗಲಿ | ನಾಳೆ ಐಪಿಎಲ್ ಫೈನಲ್, ಆರ್‌ಸಿಬಿ-ಪಂಜಾಬ್ ಕಿಂಗ್ಸ್ ಸೆಣಸಾಟ

Update: 2025-06-02 21:19 IST

PC : IPL 

ಅಹ್ಮದಾಬಾದ್: ಹದಿನೆಂಟನೇ ಆವೃತ್ತಿಯ ಐಪಿಎಲ್ ಟಿ-20 ಟೂರ್ನಿಯು ಅಂತಿಮ ಘಟ್ಟ ತಲುಪಿದ್ದು, ಮಂಗಳವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಪ್ರತಿಷ್ಠಿತ ಟ್ರೋಫಿಗಾಗಿ ಹೋರಾಡಲಿವೆ.

4ನೇ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿರುವ ಆರ್‌ಸಿಬಿ ಈ ಹಿಂದೆ 2009, 2011 ಹಾಗೂ 2016ರಲ್ಲಿ ಪ್ರಶಸ್ತಿ ವಂಚಿತವಾಗಿತ್ತು. ಈ ಬಾರಿಯಾದರೂ ಕಪ್ ಗೆಲ್ಲಲಿ ಎಂಬುದು ಆರ್‌ಸಿಬಿ ಅಭಿಮಾನಿಗಳ ಹಾರೈಕೆಯಾಗಿದೆ.

2014ರಲ್ಲಿ ಫೈನಲ್‌ಗೆ ತಲುಪುವಲ್ಲಿ ಶಕ್ತವಾಗಿದ್ದ ಪಂಜಾಬ್ ಫ್ರಾಂಚೈಸಿ ಕೆಕೆಆರ್‌ ಗೆ ಸೋಲುಂಡಿತ್ತು. ಈ ಬಾರಿ ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ. 2024ರಲ್ಲಿ ಕೆಕೆಆರ್ ತಂಡವು ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಪ್ರಶಸ್ತಿ ಜಯಿಸಿತ್ತು.

ಉಭಯ ತಂಡಗಳ ಪೈಕಿ ಯಾವುದೇ ತಂಡ ಪ್ರಶಸ್ತಿ ಗೆದ್ದರೂ ಐಪಿಎಲ್‌ನಲ್ಲಿ ಹೊಸ ತಂಡವೊಂದು ಚಾಂಪಿಯನ್ ಆಗಿ ಹೊರಹೊಮ್ಮಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News