×
Ad

IPL | ಅತ್ಯಂತ ವೇಗವಾಗಿ 200 ಐಪಿಎಲ್ ಸಿಕ್ಸ್ ಬಾರಿಸಿದ ಭಾರತೀಯ ಕೆ.ಎಲ್. ರಾಹುಲ್

Update: 2025-04-19 21:34 IST

ಕೆ.ಎಲ್. ರಾಹುಲ್ | PC ; PTI 

ಅಹ್ಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಅತ್ಯಂತ ವೇಗವಾಗಿ 200 ಸಿಕ್ಸರ್ಗಳನ್ನು ಬಾರಿಸಿದ ಭಾರತೀಯನಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿಕೆಟ್ ಕೀಪರ್-ಬ್ಯಾಟರ್ ಕೆ.ಎಲ್. ರಾಹುಲ್ ಹೊರಹೊಮ್ಮಿದ್ದಾರೆ. ಜೊತೆಗೆ ಜಾಗತಿಕ ಮಟ್ಟದಲ್ಲಿ ಅವರು ಈ ಪಟ್ಟಿಯಲ್ಲಿ ಮೂರನೆ ಸ್ಥಾನದಲ್ಲಿದ್ದಾರೆ.

ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಮ್ ನಲ್ಲಿ ಶನಿವಾರ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ, ತನ್ನ 129ನೇ ಇನಿಂಗ್ಸ್ನಲ್ಲಿ ಅವರು ಈ ಸಾಧನೆ ಮಾಡಿದ್ದಾರೆ.

ಜಾಗತಿಕ ಮಟ್ಟದಲ್ಲಿ ಅತ್ಯಂತ ವೇಗವಾಗಿ 200 ಸಿಕ್ಸ್ಗಳನ್ನು ಬಾರಿಸಿದವರ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ ಮೊದಲ ಸ್ಥಾನದಲ್ಲಿದ್ದಾರೆ. ಅವರು ಕೇವಲ 69 ಇನಿಂಗ್ಸ್ಗಳಲ್ಲಿ 200 ಐಪಿಎಲ್ ಸಿಕ್ಸ್ಗಳನ್ನು ಸಿಡಿಸಿದ್ದಾರೆ. ಅವರದೇ ದೇಶದ ಆ್ಯಂಡ್ರಿ ರಸೆಲ್ 97 ಇನಿಂಗ್ಸ್ ಗಳಲ್ಲಿ ಈ ಸಾಧನೆಗೈದು ಎರಡನೇ ಸ್ಥಾನದಲ್ಲಿದ್ದಾರೆ. ಈ ಇಬ್ಬರು ಮಾತ್ರ 100ಕ್ಕಿಂತಲೂ ಕಡಿಮೆ ಇನಿಂಗ್ಸ್ ಗಳಲ್ಲಿ 200 ಐಪಿಎಲ್ ಸಿಕ್ಸರ್ ಗಳನ್ನು ಈವರೆಗೆ ಸಿಡಿಸಿದ್ದಾರೆ.

ಡೆಲ್ಲಿ ಡೇರ್ಡೆವಿಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟರ್ ಎಬಿ ಡಿ ವಿಲಿಯರ್ಸ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರು137 ಇನಿಂಗ್ಸ್ ಗಳಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ.

ಈ ಹಿಂದೆ, ರಾಜ್ಯಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ 200 ಐಪಿಎಲ್ ಸಿಕ್ಸರ್ ಗಳನ್ನು ವೇಗವಾಗಿ ಬಾರಿಸಿದ ಭಾರತೀಯನಾಗಿದ್ದರು. ಅವರು ಈ ಸಾಧನೆಗೈಯಲು 159 ಇನಿಂಗ್ಸ್ ಗಳನ್ನು ತೆಗೆದುಕೊಂಡಿದ್ದರು.

ಮಹೇಂದ್ರ ಸಿಂಗ್ ಧೋನಿ ಈ ಸಾಧನೆಯನ್ನು 165 ಇನಿಂಗ್ಸ್ ಗಳಲ್ಲಿ ಮಾಡಿದ್ದಾರೆ. ಅದೇ ವೇಳೆ, ವಿರಾಟ್ ಕೊಹ್ಲಿ 180 ಇನಿಂಗ್ಸ್ಗಳನ್ನು ತೆಗೆದುಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್ ಶರ್ಮಾ ಈ ಸಾಧನೆಯನ್ನು 185 ಇನಿಂಗ್ಸ್ ಗಳಲ್ಲಿ ಮಾಡಿದ್ದರೆ, ಸುರೇಶ್ ರೈನಾ 193 ಇನಿಂಗ್ಸ್ಗಳಲ್ಲಿ 200 ಸಿಕ್ಸರ್ ಗಳನ್ನು ಬಾರಿಸಿದ್ದಾರೆ.

ಶನಿವಾರ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಬಾರಿಸಿದ ಮೊದಲ ಸಿಕ್ಸರ್ ನೊಂದಿಗೆ ರಾಹುಲ್ ಈ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ.

► ಐಪಿಎಲ್ ಇತಿಹಾಸದ ಅತಿ ಹೆಚ್ಚು ಸಿಕ್ಸರ್ಗಳು

1. ಕ್ರಿಸ್ ಗೇಲ್- 357

2. ರೋಹಿತ್ ಶರ್ಮಾ- 286

3. ವಿರಾಟ್ ಕೊಹ್ಲಿ- 282

4. ಎಮ್. ಎಸ್. ಧೋನಿ- 260

5. ಎಬಿ ಡಿ ವಿಲಿಯರ್ಸ್- 251

6. ಡೇವಿಡ್ ವಾರ್ನರ್- 236

7. ಕೀರೊನ್ ಪೊಲಾರ್ಡ್- 223

8. ಸಂಜು ಸ್ಯಾಮ್ಸನ್- 216

9. ಆ್ಯಂಡ್ರಿ ರಸೆಲ್- 212

10. ಸುರೇಶ್ ರೈನಾ- 203

11. ಕೆ.ಎಲ್. ರಾಹುಲ್- 200

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News