×
Ad

IPL | ಸತತ ಆರು ಸಿಕ್ಸರ್ ಸಿಡಿಸಿ ದಾಖಲೆ ನಿರ್ಮಿಸಿದ ರಿಯಾನ್ ಪರಾಗ್

Update: 2025-05-04 22:26 IST

 ರಿಯಾನ್ ಪರಾಗ್ | PC : PTI 

ಕೋಲ್ಕತಾ: ಐಪಿಎಲ್ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಸತತ ಆರು ಸಿಕ್ಸರ್‌ಗಳನ್ನು ಸಿಡಿಸಿ ದಾಖಲೆ ಬರೆದಿದ್ದಾರೆ.

ಇದರಲ್ಲಿ ಒಂದೇ ಓವರ್‌ನಲ್ಲಿ 5 ಸಿಕ್ಸರ್‌ಗಳ ಸಾಧನೆಯೂ ಸೇರಿದೆ.

ಕೆಕೆಆರ್ ವಿರುದ್ಧ ರವಿವಾರ ನಡೆದ ಪಂದ್ಯದಲ್ಲಿ ಪರಾಗ್ ‘ರಿಯಲ್ ಪವರ್‌ಹಿಟ್ಟರ್’ ಎಂಬುದನ್ನು ಸಾಬೀತುಪಡಿಸಿದರು.

ಮೊಯಿನ್ ಅಲಿ ಎಸೆದ ಇನಿಂಗ್ಸ್‌ನ 13ನೇ ಓವರ್‌ನಲ್ಲಿ ಸತತ 5 ಸಿಕ್ಸರ್‌ಗಳನ್ನು ಸಿಡಿಸಿದ ಪರಾಗ್ ಅಬ್ಬರಿಸಿದರು. ಆ ನಂತರ ವರುಣ್ ಚಕ್ರವರ್ತಿ ಅವರ ಓವರ್‌ನಲ್ಲಿ ತಾನೆದುರಿಸಿದ ಮೊದಲನೇ ಚೆಂಡನ್ನು ರಿವರ್ಸ್‌ಸ್ವೀಪ್ ಮೂಲಕ ಸಿಕ್ಸರ್‌ಗೆ ಅಟ್ಟಿದರು. ಆ ಮೂಲಕ ಸತತ 6 ಎಸೆತಗಳಲ್ಲಿ ಸಿಕ್ಸರ್‌ಗಳ ಸಾಧನೆ ಮಾಡಿದ್ದಾರೆ.

45 ಎಸೆತಗಳಲ್ಲಿ 95 ರನ್ ಗಳಿಸಿದ ಪರಾಗ್ ಕೇವಲ 5 ರನ್‌ನಿಂದ ಶತಕ ವಂಚಿತರಾದರು. ನಾಯಕನ ಆಟವಾಡಿದ ಪರಾಗ್ 8 ಸಿಕ್ಸರ್ ಹಾಗೂ 6 ಬೌಂಡರಿಗಳನ್ನು ಬಾರಿಸಿದರು. ಪರಾಗ್ 27 ಎಸೆತಗಳಲ್ಲಿ ಈ ವರ್ಷದ ಐಪಿಎಲ್‌ನಲ್ಲಿ ಮೊದಲ ಅರ್ಧಶತಕ ಗಳಿಸಿದರು.

‘‘ಐಪಿಎಲ್‌ನಲ್ಲಿ ಮುಂದೊಂದು ದಿನ ಒಂದೇ ಓವರ್‌ನಲ್ಲಿ 4 ಸಿಕ್ಸರ್‌ಗಳನ್ನು ಸಿಡಿಸುವೆ ಎಂದು ನನ್ನ ಆತ್ಮಸಾಕ್ಷಿ ಹೇಳುತ್ತಿದೆ’’ಎಂಬುದಾಗಿ 2023ರಲ್ಲಿ ರಿಯಾನ್ ಮಾಡಿರುವ ಟ್ವೀಟ್ ಇದೀಗ ಭಾರೀ ವೈರಲ್ ಆಗುತ್ತಿದೆ.

ಪರಾಗ್ ಐಪಿಎಲ್ ಇತಿಹಾಸದಲ್ಲಿ ಒಂದೇ ಓವರ್‌ನಲ್ಲಿ 5 ಸಿಕ್ಸರ್‌ಗಳನ್ನು ಸಿಡಿಸಿದ 5ನೇ ಬ್ಯಾಟರ್ ಆಗಿದ್ದಾರೆ. ಈ ಮೂಲಕ ವಿಶೇಷ ಪಟ್ಟಿಗೆ ಸೇರಿದ್ದಾರೆ.

*ಐಪಿಎಲ್: ಒಂದೇ ಓವರ್‌ನಲ್ಲಿ 5 ಸಿಕ್ಸರ್ ಸಿಡಿಸಿದ ಆಟಗಾರರು

5-ಕ್ರಿಸ್ ಗೇಲ್(ಆರ್‌ಸಿಬಿ)-ರಾಹುಲ್ ಶರ್ಮಾ ವಿರುದ್ಧ, 2012

5-ರಾಹುಲ್ ಟೆವಾಟಿಯ(ರಾಜಸ್ಥಾನ)-ಶೆಲ್ಡನ್ ಕೊಟ್ರೆಲ್(ಪಂಜಾಬ್ ಕಿಂಗ್ಸ್), 2020

5-ರವೀಂದ್ರ ಜಡೇಜ(ಸಿಎಸ್‌ಕೆ)-ಹರ್ಷಲ್ ಪಟೇಲ್(ಆರ್‌ಸಿಬಿ), 2021

5-ರಿಂಕು ಸಿಂಗ್(ಕೆಕೆಆರ್)-ಯಶ್ ದಯಾಳ್(ಗುಜರಾತ್), 2023

5-ರಿಯಾನ್ ಪರಾಗ್(ರಾಜಸ್ಥಾನ)-ಮೊಯಿನ್‌ಅಲಿ(ಕೆಕೆಆರ್), 2025

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News