×
Ad

2026ರ ಪುರುಷರ ಟಿ20 ವಿಶ್ವಕಪ್‌ ಗೆ ಇಟಲಿ ಅರ್ಹತೆ!

Update: 2025-07-17 22:05 IST

PC: X \ @ImTanujSingh

ದುಬೈ, ಜು. 17: ಮುಂದಿನ ವರ್ಷ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್‌ಗೆ ಅರ್ಹತೆ ಪಡೆದುಕೊಳ್ಳುವ ಮೂಲಕ ಇಟಲಿ ಕ್ರಿಕೆಟ್ ತಂಡವು ಇತಿಹಾಸ ಸೃಷ್ಟಿಸಿದೆ.

ಐಸಿಸಿ ಪುರುಷರ ಟಿ20 ವಿಶ್ವಕಪ್‌ ನ ಯುರೋಪ್ ಅರ್ಹತಾ ಪಂದ್ಯಾವಳಿಯಲ್ಲಿ, ಗುರುವಾರ ಹೇಗ್‌ ನಲ್ಲಿ ನೆದರ್‌ ಲ್ಯಾಂಡ್ಸ್ ವಿರುದ್ಧ ನಡೆದ ತನ್ನ ಕೊನೆಯ ಪಂದ್ಯದಲ್ಲಿ ಇಟಲಿ ಸೋತಿತಾದರೂ, ನೆಟ್ ರನ್ ರೇಟ್ ಆಧಾರದಲ್ಲಿ ಅದು ವಿಶ್ವಕಪ್‌ ಗೆ ತೇರ್ಗಡೆ ಹೊಂದಿತು.

ಮುಂದಿನ ಟಿ20 ವಿಶ್ವಕಪ್ ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ನಡೆಯಲಿದೆ.

ಅರ್ಹತಾ ಪಂದ್ಯಾವಳಿಯ ಕೊನೆಯ ದಿನವಾದ ಗುರುವಾರ ಎಲ್ಲಾ ನಾಲ್ಕು ತಂಡಗಳು- ನೆದರ್‌ ಲ್ಯಾಂಡ್ಸ್, ಇಟಲಿ, ಸ್ಕಾಟ್‌ಲ್ಯಾಂಡ್ ಮತ್ತು ಜರ್ಸಿ- ಆಡಿದವು. ಎಲ್ಲಾ ತಂಡಗಳಿಗೂ ಅರ್ಹತೆ ಪಡೆಯುವ ಅವಕಾಶಗಳಿದ್ದವು. ಆದರೆ, ಅಂತಿಮವಾಗಿ ನೆದರ್‌ ಲ್ಯಾಂಡ್ಸ್ ಮತ್ತು ಇಟಲಿ ತಂಡಗಳು ಪಂದ್ಯಾವಳಿಯಲ್ಲಿ ತಮ್ಮ ಸ್ಥಾನಗಳನ್ನು ಖಚಿತಪಡಿಸಿದವು.

ಐಸಿಸಿ ಪುರುಷರ ಟಿ20 ವಿಶ್ವಕಪ್‌ ಗೆ ಇಟಲಿ ಅರ್ಹತೆ ಪಡೆದಿರುವುದು ಇದೇ ಮೊದಲ ಬಾರಿಯಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಇಟಲಿ 7 ವಿಕೆಟ್‌ ಗಳ ನಷ್ಟಕ್ಕೆ 134 ರನ್ ಗಳಿಸಿತು. ಅರ್ಹತೆ ಗಳಿಸಬೇಕಾದರೆ ನೆದರ್‌ ಲ್ಯಾಂಡ್ಸ್ ತಂಡವು 14 ಓವರ್‌ಗಳಿಗೂ ಮೊದಲು ವಿಜಯ ಗಳಿಸದಂತೆ ಇಟಲಿ ನೋಡಿಕೊಳ್ಳಬೇಕಾಗಿತ್ತು. ನೆದರ್‌ಲ್ಯಾಂಡ್ಸ್ 17ನೇ ಓವರ್‌ನಲ್ಲಿ ವಿಜಯ ಗಳಿಸಿತು. ಈ ಮೂಲಕ ಇಟಲಿಯು ನೆಟ್ ರನ್ ರೇಟ್ ಆಧಾರದಲ್ಲಿ ಜರ್ಸಿಯನ್ನು ಹಿಂದಿಕ್ಕಿತು. ಇದಕ್ಕೂ ಮೊದಲು, ಜರ್ಸಿ ತಂಡವು ಸ್ಕಾಟ್‌ ಲ್ಯಾಂಡ್ ತಂಡವನ್ನು ಸೋಲಿಸಿತ್ತು.

2026ರ ಪುರುಷರ ಟಿ20 ವಿಶ್ವಕಪ್‌ ಗೆ ಈವರೆಗೆ 15 ತಂಡಗಳು ಅರ್ಹತೆ ಪಡೆದಿವೆ. ಮುಂದೆ ನಡೆಯಲಿರುವ ಇಎಪಿ ಅರ್ಹತಾ ಪಂದ್ಯಾವಳಿಯಿಂದ ಇನ್ನೂ ಮೂರು ಮತ್ತು ಆಫ್ರಿಕಾ ಅರ್ಹತಾ ಪಂದ್ಯಾವಳಿಯಿಂದ ಎರಡು ತಂಡಗಳು ಅರ್ಹತೆ ಪಡೆಯಲಿವೆ.

ಜುಲೈ 11ರ ವೇಳೆಗೆ ಟಿ20 ವಿಶ್ವಕಪ್‌ ಗೆ ತೇರ್ಗಡೆಯಾಗಿರುವ ತಂಡಗಳು:

ಅಫ್ಘಾನಿಸ್ತಾನ, ಆಸ್ಟ್ರೇಲಿಯ, ಬಾಂಗ್ಲಾದೇಶ, ಕೆನಡ, ಇಂಗ್ಲೆಂಡ್, ಭಾರತ, ಐರ್‌ಲ್ಯಾಂಡ್, ನ್ಯೂಝಿಲ್ಯಾಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಅಮೆರಿಕ ಮತ್ತು ವೆಸ್ಟ್ ಇಂಡೀಸ್.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News