×
Ad

ಜನ್ನಿಕ್ ಸಿನ್ನರ್ ಗೆ ಯುಎಸ್ ಓಪನ್ ಕಿರೀಟ

Update: 2024-09-09 10:52 IST

Photo: x.com/janniksin

ನ್ಯೂಯಾರ್ಕ್: ವಿಶ್ವದ ಅಗ್ರ ಕ್ರಮಾಂಕದ ಆಟಗಾರ ಜನ್ನಿಕ್ ಸಿನ್ನರ್ ರವಿವಾರ ಟೇಲರ್ ಫ್ರಿಟ್ಸ್ ಅವರನ್ನು ನೇರ ಸೆಟ್‍ಗಳಿಂದ ಸೋಲಿಸುವ ಮೂಲಕ ವೃತ್ತಿಜೀವನದ ಎರಡನೇ ಗ್ರ್ಯಾನ್‌ಸ್ಲಾಮ್ ಗೆದ್ದ ಕೀರ್ತಿಗೆ ಪಾತ್ರರಾದರು.

ಇದರೊಂದಿಗೆ 21 ವರ್ಷಗಳಲ್ಲಿ ಮೊಟ್ಟಮೊದಲ ಬಾರಿಗೆ ಅಮೆರಿಕನ್ ಆಟಗಾರರೊಬ್ಬರು ಪುರುಷರ ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುವ ಅಮೆರಿಕದ ಕನಸು ನುಚ್ಚುನೂರಾಯಿತು. ಕಳೆದ ಜನವರಿಯಲ್ಲಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆಲ್ಲುವ ಮೂಲಕ ಮೊಟ್ಟಮೊದಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದಿದ್ದ ಸಿನ್ನೆರ್, ನ್ಯೂಯಾರ್ಕ್‍ನಲ್ಲಿ ಪ್ರಶಸ್ತಿ ಗೆದ್ದ ಮೊಟ್ಟಮೊದಲ ಇಟೆಲಿಯನ್ ಆಟಗಾರ ಎಂಬ ಹೆಗ್ಗಳಿಕೆಗೆ ಭಾಜನರಾದರು.

ರವಿವಾರ ನಡೆದ ಫೈನಲ್‍ನಲ್ಲಿ ಜಿನ್ನರ್, ಟೇಲರ್ ಅವರನ್ನು 6-3, 6-4, 7-5 ನೇರ ಸೆಟ್‍ಗಳಿಂದ ಮಣಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News