×
Ad

ಭಾರತ – ಆಸ್ಟ್ರೇಲಿಯಾ ಪಂದ್ಯದಲ್ಲಿ ಜಾರ್ವೋ ರಿಟರ್ನ್ಸ್‌!

Update: 2023-10-08 16:32 IST

PHOTO : twitter.com/Boxoffice_Boom

ಚೆನ್ನೈ : ಇಂಗ್ಲೆಂಡ್‌ ನ ಯೂಟ್ಯೂಬರ್ ಡೇನಿಯಲ್ ಜಾರ್ವಿಸ್ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2023 ರ ವಿಶ್ವಕಪ್ನ ಐದನೇ ಪಂದ್ಯದಲ್ಲಿ ಭದ್ರತೆ ಉಲ್ಲಂಘಿಸಿ ಕ್ರೀಡಾಂಗಣದೊಳಗೆ ಪ್ರವೇಶಿಸಿದ ಘಟನೆ ವರದಿಯಾಗಿದೆ.

ಜಾರ್ವೊ ಎಂದು ಕರೆಯಲ್ಪಡುವ ಯೂಟ್ಯೂಬರ್2021 ರಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ಮೂರು ಪಂದ್ಯಗಳಲ್ಲಿ ಕ್ರೀಡಾಂಗಣ ಪ್ರವೇಶಿಸಿ ಸುದ್ದಿಯಾಗಿದ್ದರು.

ಪಂದ್ಯದ ವೇಳೆ ಚೆಪಾಕ್ ಕ್ರೀಡಾಂಗಣ ಅಕ್ರಮ ಪ್ರವೇಶಿಸಿದ ಚಿತ್ರಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ. ನಂತರ ಅವರನ್ನು ಭದ್ರತಾ ಸಿಬ್ಬಂದಿ ಮೈದಾನದಿಂದ ಹೊರಗೆ ಕರೆದೊಯ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News