×
Ad

ಲಾರ್ಡ್ಸ್ ಟೆಸ್ಟ್‌ಗೆ ಜಸ್‌ಪ್ರಿತ್ ಬುಮ್ರಾ ಲಭ್ಯ

Update: 2025-07-07 21:35 IST

ಜಸ್‌ಪ್ರಿತ್ ಬುಮ್ರಾ | PC : PTI 

ಲಂಡನ್: ಸ್ಟಾರ್ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ ಅವರು ಇಂಗ್ಲೆಂಡ್ ಕ್ರಿಕೆಟ್ ತಂಡದ ವಿರುದ್ಧ ಗುರುವಾರ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ 3ನೇ ಟೆಸ್ಟ್ ಪಂದ್ಯಕ್ಕೆ ಲಭ್ಯ ಇರುತ್ತಾರೆ ಎಂದು ಭಾರತ ತಂಡದ ನಾಯಕ ಶುಭಮನ್ ಗಿಲ್ ರವಿವಾರ ದೃಢಪಡಿಸಿದ್ದಾರೆ.

31ರ ಹರೆಯದ ಬುಮ್ರಾಗೆ ಅವರ ಕೆಲಸದ ಒತ್ತಡವನ್ನು ನಿಭಾಯಿಸಲು ಎಜ್‌ ಬಾಸ್ಟನ್‌ ನಲ್ಲಿ ರವಿವಾರ ಕೊನೆಗೊಂಡಿರುವ 2ನೇ ಟೆಸ್ಟ್ ಪಂದ್ಯದಿಂದ ವಿಶ್ರಾಂತಿ ನೀಡಲಾಗಿತ್ತು. ಬುಮ್ರಾ ಅವರು ಪ್ರಸಕ್ತ 5 ಪಂದ್ಯಗಳ ಸರಣಿಯಲ್ಲಿ ಕೇವಲ 3ರಲ್ಲಿ ಮಾತ್ರ ಆಡುವ ಸಾಧ್ಯತೆಯಿದೆ.

2ನೇ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ಅವರ ಅನುಪಸ್ಥಿತಿಯ ನಡುವೆಯೂ ಭಾರತ ತಂಡವು ಇಂಗ್ಲೆಂಡ್ ತಂಡವನ್ನು 337 ರನ್ ಅಂತರದಿಂದ ಹೀನಾಯವಾಗಿ ಸೋಲಿಸಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನ 4ನೇ ಅತಿ ದೊಡ್ಡ ಗೆಲುವು ದಾಖಲಿಸಿದೆ. ಭಾರತದಿಂದ ಹೊರಗೆ ದೊಡ್ಡ ರನ್ ಅಂತರದಿಂದ ಗೆಲುವು ದಾಖಲಿಸಿ ಸರಣಿಯನ್ನು 1-1ರಿಂದ ಸಬಬಲಗೊಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News