×
Ad

ಜಸ್‌ಪ್ರಿತ್ ಬುಮ್ರಾ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಲಭ್ಯ?

Update: 2025-07-17 22:04 IST

ಜಸ್‌ಪ್ರಿತ್ ಬುಮ್ರಾ | PC : PTI 

ಹೊಸದಿಲ್ಲಿ, : ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫೋರ್ಡ್‌ನಲ್ಲಿ ಜುಲೈ 23ರಿಂದ ಆರಂಭವಾಗಲಿರುವ ಇಂಗ್ಲೆಂಡ್ ತಂಡದ ವಿರುದ್ಧದ 4ನೇ ಟೆಸ್ಟ್ ಪಂದ್ಯಕ್ಕೆ ಜಸ್‌ಪ್ರಿತ್ ಬುಮ್ರಾ ಲಭ್ಯವಿರುವ ಸಾಧ್ಯತೆಯಿದೆ ಎಂದು ಟೀಮ್ ಇಂಡಿಯಾದ ಸಹಾಯಕ ಕೋಚ್ ರಿಯಾನ್ ಟೆನ್ ಡೊಶಾಟ್ ಶುಕ್ರವಾರ ಸುಳಿವು ನೀಡಿದ್ದಾರೆ.

ಇಂಗ್ಲೆಂಡ್ ಕ್ರಿಕೆಟ್ ಪ್ರವಾಸ ಆರಂಭವಾಗುವ ಮೊದಲು ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಅವರು ಕೆಲಸದ ಒತ್ತಡವನ್ನು ನಿಭಾಯಿಸುವ ಸಲುವಾಗಿ ಬುಮ್ರಾ ಅವರು 3 ಟೆಸ್ಟ್ ಪಂದ್ಯಗಳಲ್ಲಿ ಮಾತ್ರ ಆಡಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಬುಮ್ರಾ ಎಜ್‌ಬಾಸ್ಟನ್‌ನಲ್ಲಿ ನಡೆದಿದ್ದ 2ನೇ ಪಂದ್ಯವನ್ನು ಆಡಿರಲಿಲ್ಲ. ಈ ಪಂದ್ಯವನ್ನು ಭಾರತ ತಂಡ ಗೆದ್ದುಕೊಂಡಿತ್ತು.

‘‘ನಾವು ಕೊನೆಯ ಎರಡು ಟೆಸ್ಟ್ ಪಂದ್ಯಗಳ ಪೈಕಿ ಒಂದರಲ್ಲಿ ಬುಮ್ರಾರನ್ನು ಆಡಿಸಲಿದ್ದೇವೆ. ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯದಲ್ಲಿ ಅವರು ಆಡುವ ಸಾಧ್ಯತೆಯಿದೆ. ಆದರೆ ನಾವು ಮತ್ತೊಮ್ಮೆ ಎಲ್ಲ ಅಂಶಗಳನ್ನು ನೋಡಲಿದ್ದೇವೆ’’ ಎಂದು ಡೊಶಾಟ್ ಹೇಳಿದರು.

3ನೇ ಟೆಸ್ಟ್ ಪಂದ್ಯದ 4ನೇ ಇನಿಂಗ್ಸ್‌ನಲ್ಲಿ 18 ಓವರ್ ಬೌಲಿಂಗ್ ಮಾಡಿ, ಇಂಗ್ಲೆಂಡ್ ತಂಡ ಲಾರ್ಡ್ಸ್‌ನಲ್ಲಿ 22 ರನ್ ಅಂತರದ ಗೆಲುವಿಗೆ ಮಹತ್ವದ ಪಾತ್ರವಹಿಸಿದ್ದ ನಾಯಕ ಬೆನ್ ಸ್ಟೋಕ್ಸ್‌ರನ್ನು ಟೆನ್ ಡೊಶಾಟ್ ಶ್ಲಾಘಿಸಿದರು.

ಬೆನ್ ಸ್ಟೋಕ್ಸ್ ಅವರು ಕೊನೆಯ ದಿನದಾಟದಲ್ಲಿ ಹಲವು ಓವರ್ ಬೌಲಿಂಗ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಬ್ಯಾಟಿಂಗ್ ಹಾಗೂ ಫೀಲ್ಡಿಂಗ್‌ನಲ್ಲೂ ಮಿಂಚಿದ್ದರು. ನಮ್ಮ ಬೌಲರ್‌ಗಳನ್ನು ಎದುರಾಳಿ ತಂಡಗಳ ಓರ್ವ ಆಟಗಾರನೊಂದಿಗೆ ಹೋಲಿಕೆ ಮಾಡಲಾರೆ ಎಂದು ಡೊಶೆಟ್ ಹೇಳಿದರು.

ಕೆಲಸ ಒತ್ತಡವನ್ನು ನಿಭಾಯಿಸಲು ಬುಮ್ರಾರನ್ನು ಆಡಿಸದೆ ಇರುವ ಭಾರತ ತಂಡದ ನಿರ್ಧಾರವನ್ನು ಸಮರ್ಥಿಸಿಕೊಂಡ ಡೊಶೆಟ್, ನಮಗೆ ನಮ್ಮದೇ ಆದ ಶಕ್ತಿ ಇದೆ. ಸ್ಪೆಲ್‌ಗಳಲ್ಲಿ ಬುಮ್ರಾ ಏನು ಮಾಡುತ್ತಾರೆಂದು ನಮಗೆ ಗೊತ್ತಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News