×
Ad

ವಿಶ್ವಕಪ್‌ ಗೆದ್ದ ನಂತರ ತಂಡದ ಗೀತೆ ಬಹಿರಂಗಪಡಿಸಿದ ಜೆಮಿಮಾ ರೊಡ್ರಿಗಸ್

ಸುಮಾರು 4 ವರ್ಷಗಳ ಹಿಂದೆಯೇ ನಿರ್ಧಾರ!

Update: 2025-11-03 21:49 IST

PC : @BCCI 

ಮುಂಬೈ, ನ.3: ಭಾರತ ಮಹಿಳಾ ತಂಡವು ತನ್ನ ಚೊಚ್ಚಲ ಐಸಿಸಿ ಮಹಿಳಾ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದ ನಂತರ ಡಿ.ವೈ.ಪಾಟೀಲ್ ಸ್ಟೇಡಿಯಂನಲ್ಲಿ ತಡರಾತ್ರಿಯ ತನಕವೂ ಸಂಭ್ರಮಾಚರಣೆಯಲ್ಲಿ ತೊಡಗಿಸಿಕೊಂಡಿತು.

ದಕ್ಷಿಣ ಆಫ್ರಿಕಾ ವಿರುದ್ಧ 52 ರನ್‌ ನಿಂದ ಗೆದ್ದ ನಂತರ ಭಾರತದ ಆಟಗಾರ್ತಿಯರು ಒಂದೆಡೆ ಒಟ್ಟುಗೂಡಿದರು. ಆಗ ಹಬ್ಬದ ವಾತಾವರಣ ಕಂಡುಬಂತು. ಈ ವೇಳೆ ತಮ್ಮ ತಂಡದ ಗೀತೆಯೊಂದನ್ನು ಬಹಿರಂಗಗೊಳಿಸಿದರು.

ವಿಶ್ವಕಪ್ ಗೆದ್ದ ನಂತರವೇ ತಂಡವು ಹಾಡನ್ನು ಅನಾವರಣಗೊಳಿಸುವುದಾಗಿ ಪ್ರತಿಜ್ಞೆ ಮಾಡಿತ್ತು ಎಂದಿರುವ ಬ್ಯಾಟರ್ ಜೆಮಿಮಾ ರೊಡ್ರಿಗಸ್, ನಾವು ವಿಶ್ವಕಪ್ ಗೆದ್ದಾಗ ಮಾತ್ರ ನಮ್ಮ ತಂಡದ ಹಾಡನ್ನು ಬಹಿರಂಗಪಡಿಸಲು ಸುಮಾರು 4 ವರ್ಷಗಳ ಹಿಂದೆಯೇ ನಿರ್ಧರಿಸಿದ್ದೆವು ಎಂದು ಬಿಸಿಸಿಐ ಬಿಡುಗಡೆ ಮಾಡಿರುವ ವೀಡಿಯೊದಲ್ಲಿ ಜೆಮಿಮಾ ಹೇಳಿದರು.

‘‘ಟೀಮ್ ಇಂಡಿಯಾ, ಟೀಮ್ ಇಂಡಿಯಾ, ಕರ್ದೇ ಸಬ್ಕಿ ಹವಾ ಟೈಟ್, ಟೀಮ್ ಇಂಡಿಯಾ ಈಸ್ ಹೀಯರ್ ಟು ಫೈಟ್ ಹಾಗೂ ‘ರಹೇಗಾ ಸಬ್ಸೆ ಊಪರ್ ಹಮಾರಾ ತಿರಂಗಾ’ ಎಂಬ ಸಾಲುಗಳು ಕ್ರೀಡಾಂಗಣದಾದ್ಯಂತ ಪ್ರತಿಧ್ವನಿಸಿದವು.

ತಂಡವು ನಗುತ್ತಾ ಒಟ್ಟಿಗೆ ಹಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ತಕ್ಷಣವೇ ವೈರಲ್ ಆಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News