×
Ad

ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಬ್ರಿಟನ್ ಬಾಕ್ಸರ್ ಜೋಶುವಾ ಆಸ್ಪತ್ರೆಯಿಂದ ಬಿಡುಗಡೆ

Update: 2026-01-01 21:20 IST

 ಬಾಕ್ಸರ್ ಜೋಶುವಾ | Photo Credit : x 

ಲಂಡನ್, ಜ.1: ಬ್ರಿಟಿಷ್ ಬಾಕ್ಸರ್ ಆಂಥೋನಿ ಜೋಶುವಾರನ್ನು ಬುಧವಾರ ತಡರಾತ್ರಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ನೈಜೀರಿಯಾದ ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ಬಾರಿಯ ಮಾಜಿ ಹೇವಿ ವೇಯ್ಟ್ ಚಾಂಪಿಯನ್ ಹಾಗೂ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಜೋಶುವಾ ಪ್ರಯಾಣಿಸುತ್ತಿದ್ದ ವಾಹನವು ಸೋಮವಾರ ಲಾಗೋಸ್ ಸಮೀಪ ನಿಂತಿದ್ದ ಟ್ರಕ್‌ ಗೆ ಢಿಕ್ಕಿ ಹೊಡೆದ ಪರಿಣಾಮ, ಜೋಶುವಾ ಅವರೊಂದಿಗಿದ್ದ ಇಬ್ಬರು ಆಪ್ತರು ಹಾಗೂ ತಂಡದ ಸದಸ್ಯರು ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್ ಜೋಶುವಾ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

ಅಪಘಾತದಲ್ಲಿ ಗಾಯಗೊಳ್ಳುವ ಕೇವಲ 10 ದಿನಗಳ ಮೊದಲು ಜೋಶುವಾ ಅವರು ಮಿಯಾಮಿಯಲ್ಲಿ ನಡೆದಿದ್ದ ನೆಟ್‌ಫ್ಲಿಕ್ಸ್ ಪಂದ್ಯವೊಂದರಲ್ಲಿ ಬಾಕ್ಸರ್ ಆಗಿ ಪರಿವರ್ತನೆಗೊಂಡಿರುವ ಯೂಟ್ಯೂಬರ್ ಜೇಕ್ ಪಾಲ್ ಅವರನ್ನು ಸೋಲಿಸಿದ್ದರು. ಭವಿಷ್ಯದಲ್ಲಿ ಪ್ರಮುಖ ಬಾಕ್ಸಿಂಗ್ ಪ್ರಶಸ್ತಿಗಳನ್ನು ಗೆಲ್ಲುವ ಪ್ರಯತ್ನದಲ್ಲಿ ಫಿಟ್ನೆಸ್ ಸುಧಾರಿಸಿಕೊಳ್ಳುವತ್ತ ಗಮನ ಹರಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News