×
Ad

ಜೂನಿಯರ್ ಜುಡೊ ವಿಶ್ವ ಚಾಂಪಿಯನ್‌ಶಿಪ್ : ಭಾರತಕ್ಕೆ ಮೊತ್ತ ಮೊದಲ ಪದಕ ಗೆದ್ದುಕೊಟ್ಟ ಲಿಂಥೋಯ್ ಚಾನಂಬಮ್

Update: 2025-10-07 20:30 IST

 ಲಿಂಥೋಯ್ ಚಾನಂಬಮ್ | Photo Credit : @TheKhelIndia

ಚೆನ್ನೈ, ಅ.7: ಜೂನಿಯರ್ ಜುಡೊ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಲಿಂಥೋಯ್ ಚಾನಂಬಮ್ ಪದಕ ಗೆದ್ದಿರುವ ಭಾರತದ ಮೊದಲ ಅತ್ಲೀಟ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಪೆರುವಿನ ಲಿಮಾದಲ್ಲಿ ಮಂಗಳವಾರ ನಡೆದ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಚಾನಂಬಮ್ ಈ ಸಾಧನೆ ಮಾಡಿದ್ದಾರೆ.

ಮಹಿಳೆಯರ 63 ಕೆಜಿ ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಚಾನಂಬಮ್ ಅವರು ನೆದರ್‌ಲ್ಯಾಂಡ್ಸ್‌ನ ಜೋನಿ ಗೈಲೆನ್‌ರನ್ನು ಮಣಿಸಿ ಐತಿಹಾಸಿಕ ಕಂಚು ತನ್ನದಾಗಿಸಿಕೊಂಡರು.

ಗ್ರೂಪ್ ಹಂತದಲ್ಲಿ ಜಪಾನಿನ ಸೋ ಮೊರಿಚಿಕಾ ವಿರುದ್ಧ ಸೋತಿದ್ದ ಚಾನಂಬಮ್, ರಿಪಿಚೇಜ್ ಮೂಲಕ ಕಂಚಿನ ಪದಕದ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News