×
Ad

ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್ | ಟೀಮ್ ವಿಭಾಗದಲ್ಲಿ ಎರಡು ಚಿನ್ನದ ಪದಕ ಜಯಿಸಿದ ಭಾರತದ ಶೂಟರ್‌ಗಳು

Update: 2024-09-29 21:12 IST

PC ; X 

ಲಿಮಾ : ಪುರುಷರ ಹಾಗೂ ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಜಯಿಸಿರುವ ಭಾರತೀಯ ಶೂಟರ್‌ಗಳು ಪೆರುವಿನಲ್ಲಿ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ (ರೈಫಲ್/ಪಿಸ್ತೂಲ್/ಶಾಟ್‌ಗನ್)ತಮ್ಮ ಅಭಿಯಾನಯನ್ನು ಉತ್ತಮವಾಗಿ ಆರಂಭಿಸಿದ್ದಾರೆ.

ಉಮೇಶ್ ಚೌಧರಿ, ಪ್ರದ್ಯುಮನ್ ಸಿಂಗ್ ಹಾಗೂ ಮುಕೇಶ್ ನೆಲವಲ್ಲಿ ಅವರನ್ನೊಳಗೊಂಡ ಜೂನಿಯರ್ ಆಟಗಾರರು 10 ಮೀ. ಏರ್ ಪಿಸ್ತೂಲ್‌ನ ಪುರುಷರ ಟೀಮ್ ಸ್ಪರ್ಧಾವಳಿಯಲ್ಲಿ ಒಟ್ಟು 1,726 ಪಾಯಿಂಟ್ಸ್ ಗಳಿಸಿದರು. ಎರಡನೇ ಸ್ಥಾನ ಪಡೆದಿರುವ ರೊಮೇನಿಯಾಗಿಂತ 10 ಅಂಕ ಹೆಚ್ಚು ಗಳಿಸಿದ್ದಾರೆ. ಇಟಲಿ ತಂಡ(1,707)ಕಂಚಿನ ಪದಕ ಜಯಿಸಿದೆ.

ಚೌಧರಿ ಅವರು ಫೈನಲ್‌ಗೆ ತಡವಾಗಿ ಆಗಮಿಸಿದ ಕಾರಣಕ್ಕೆ ಎರಡು ಅಂಕಗಳನ್ನು ಕಳೆದುಕೊಂಡ ಹಿನ್ನೆಲೆಯಲ್ಲಿ ವೈಯಕ್ತಿಕ ವಿಭಾಗದಲ್ಲಿ ಸ್ವರ್ಣ ಪದಕ ಗೆಲ್ಲುವ ಅವಕಾಶದಿಂದ ವಂಚಿತರಾದರು.

ಇದಕ್ಕೂ ಮೊದಲು ಅರ್ಹತಾ ಸುತ್ತಿನಲ್ಲಿ ಕ್ರಮವಾಗಿ ಮೂರನೇ ಹಾಗೂ ನಾಲ್ಕನೇ ಸ್ಥಾನ ಪಡೆದಿದ್ದ ಚೌಧರಿ ಹಾಗೂ ಸಿಂಗ್ ಅವರು ವೈಯಕ್ತಿಕ ವಿಭಾಗದಲ್ಲಿ ಫೈನಲ್‌ಗೆ ತಲುಪಿದ್ದರು. ಚೌಧರಿ 580 ಹಾಗೂ ಸಿಂಗ್ 578 ಅಂಕ ಗಳಿಸಿದ್ದರೂ ಕ್ರಮವಾಗಿ 6ನೇ ಹಾಗೂ 8ನೇ ಸ್ಥಾನ ಪಡೆದು ವೈಯಕ್ತಿಕ ಪದಕಗಳಿಂದ ವಂಚಿತರಾದರು.

ರೊಮೇನಿಯಾದ ಲುಕಾ ಜೋಲ್ಡಿಯಾ ಚಿನ್ನದ ಪದಕ ಜಯಿಸಿದರೆ, ಚೈನೀಸ್ ತೈಪೆಯ ಸೀಹ್ ಸಿಯಾಂಗ್-ಚೆನ್ ಬೆಳ್ಳಿ ಪದಕ ಜಯಿಸಿದರು.

ಕನಿಷ್ಕಾ ದಾಗರ್, ಲಕ್ಷಿತಾ ಹಾಗೂ ಅಂಜಲಿ ಚೌಧರಿ ಅವರನ್ನೊಳಗೊಂಡ ತಂಡವು 1,708 ಅಂಕ ಗಳಿಸಿ ಜೂನಿಯರ್ ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದರು. ಭಾರತ ತಂಡ ಅಝರ್‌ಬೈಜಾನ್ ತಂಡವನ್ನು ಒಂದು ಅಂಕದಿಂದ ಹಿಂದಿಕ್ಕಿ ಮೊದಲ ಸ್ಥಾನ ಪಡೆಯಿತು. ಉಕ್ರೇನ್ ತಂಡ ಕಂಚಿನ ಪದಕ ಜಯಿಸಿತು.

ಅರ್ಹತಾ ಸುತ್ತಿನಲ್ಲಿ ತಲಾ 573 ಅಂಕ ಗಳಿಸಿದ ಕನಿಷ್ಕಾ ದಾಗರ್ ಹಾಗೂ ಕನಕ್ ವೈಯಕ್ತಿಕ ವಿಭಾಗದಲ್ಲಿ ಫೈನಲ್‌ಗೆ ತಲುಪಿದರು.

ಫೈನಲ್‌ನಲ್ಲಿ 217.6 ಅಂಕ ಗಳಿಸಿದ ಕನಕ್ ಕಂಚು ಜಯಿಸಿದರೆ, ದಾಗರ್ 8ನೇ ಸ್ಥಾನ ಪಡೆದರು.

ಚೈನೀಸ್ ತೈಪೆಯ ಚೆನ್-ಯು-ಚುನ್ ಚಿನ್ನ ಜಯಿಸಿದರೆ, ಸ್ಲೊವೇಕಿಯಾದ ಮಂಜಾ ಸ್ಲಾಕ್ ಬೆಳ್ಳಿ ಗೆದ್ದುಕೊಂಡರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News