×
Ad

ಪುರುಷರ ಹಾಫ್ ಮ್ಯಾರಥಾನ್ | ವಿಶ್ವ ದಾಖಲೆ ಮುರಿದ ಇಥಿಯೋಪಿಯಾದ ಕೆಜೆಲ್ಚಾ

Update: 2024-10-27 21:40 IST

ಯೊಮಿಫ್ ಕೆಜೆಲ್ಚಾ | PC :X@addisstandard 

ಮ್ಯಾಡ್ರಿಡ್ : ಸ್ಪೇನ್‌ನ ವೆಲೆನ್ಸಿಯಾದಲ್ಲಿ ರವಿವಾರ ನಡೆದ ಪುರುಷರ ಹಾಫ್ ಮ್ಯಾರಥಾನ್‌ನಲ್ಲಿ 57 ನಿಮಿಷ ಹಾಗೂ 30 ಸೆಕೆಂಡ್‌ನಲ್ಲಿ ಗುರಿ ತಲುಪಿದ ಇಥಿಯೋಪಿಯಾದ ಓಟಗಾರ ಯೊಮಿಫ್ ಕೆಜೆಲ್ಚಾ ವಿಶ್ವ ದಾಖಲೆಯನ್ನು ಮುರಿದರು.

ಕೆಜೆಲ್ಚಾ ಕೇವಲ ಒಂದು ಸೆಕೆಂಡ್‌ ನಿಂದ ಹಿಂದಿನ ವಿಶ್ವ ದಾಖಲೆಯನ್ನು ಮುರಿದರು. 2021ರಲ್ಲಿ ಲಿಸ್ಬನ್‌ ನಲ್ಲಿ ಕೀನ್ಯದ ಜೇಕಪ್ ಕಿಪಿಲ್ಮಾ ವಿಶ್ವ ದಾಖಲೆ ನಿರ್ಮಿಸಿದ್ದರು.

ಕೇವಲ ಆರನೇ ಹಾಫ್ ಮ್ಯಾರಥಾನ್ ಓಡುತ್ತಿರುವ 27ರ ಹರೆಯದ ಕೆಜೆಲ್ಚಾ ಆರಂಭದಲ್ಲಿ ಹಿನ್ನಡೆಯಲ್ಲಿದ್ದರು. ಆ ನಂತರ ತನ್ನ ವೇಗವನ್ನು ಹೆಚ್ಚಿಕೊಂಡರು.

ವರ್ಲ್ಡ್ ಇಂಡೋರ್ ಮೈಲ್ ರೆಕಾರ್ಡ್ ಹೊಂದಿರುವ ಕೆಜೆಲ್ಚಾ ಕೀನ್ಯದ ಡೇನಿಯಲ್ ಮ್ಯಾಟಿಕೊ ಹಾಗೂ ಕಿಪ್ಕೋಚ್‌ರನ್ನು ಹಿಂದಿಕ್ಕಿ ದಾಖಲೆಯ ಸಮಯದಲ್ಲಿ ರೇಸ್ ಅನ್ನು ಗೆದ್ದುಕೊಂಡರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News