×
Ad

ಕ್ರಿಕೆಟ್ ಅಂಗಳದ ಕ್ರೀಡಾ ಸ್ಪೂರ್ತಿ 'ಕಿಂಗ್ ಕೊಹ್ಲಿ'

Update: 2023-10-11 22:43 IST

Photo: X

ಹೊಸದಿಲ್ಲಿ : ಇಲ್ಲಿನ ಅರುಣ್ ಜೇಟ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿಯ ಇಂಡಿಯಾ ಮತ್ತು ಅಫ್ಘಾನಿಸ್ತಾನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತೋರಿದ ಕ್ರೀಡಾ ಸ್ಫೂರ್ತಿ ಗೆ ಇಡೀ ಮೈದಾನ ಸಾಕ್ಷಿ ಆಯಿತು.

ಬುಧವಾರ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ನಡುವಣ ಪಂದ್ಯವನ್ನು ಇಂಡಿಯಾ ಗೆದ್ದು ಕೊಂಡಿದೆ. ಆದರೆ ಪಂದ್ಯದ ಮದ್ಯೆ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಸಂದರ್ಭ ಅಭಿಮಾನಿಗಳು ಅಫ್ಘಾನ್ ಬೌಲರ್ ನವೀನ್ ಉಲ್ ಹಕ್ ಅವರನ್ನು ತೀವ್ರವಾಗಿ ಅಪಹಾಸ್ಯ ಮಾಡುತ್ತಿದ್ದರು. ಇದರಿಂದ ಅವರಿಗೆ ಇರುಸು ಮುರುಸು ಉಂಟಾಯಿತು. ಇದನ್ನು ಗಮನಿಸಿ ವಿರಾಟ್ ಕೊಹ್ಲಿ ನವೀನ್ ಉಲ್ ಹಕ್ ರನ್ನು ತಬ್ಬಿಕೊಂಡು ಅಭಿಮಾನಿಗಳಲ್ಲಿ ಅಪಹಾಸ್ಯ ಮಾಡದಂತೆ ಮನವಿ ಮಾಡಿದ ಹಾಗೆ ಕಂಡು ಬಂತು.




ಕಳೆದ ವರ್ಷ ಐಪಿಎಲ್ ಸಂದರ್ಭ ಆರ್ಸಿಬಿ ಮತ್ತು ಲಕ್ನೋ ವಿರುದ್ದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ನವೀನ್ ಮದ್ಯೆ ಮಾತಿನ ಚಕಮಕಿ ನಡೆದಿತ್ತು. ಅದು ಪಂದ್ಯ ಬಳಿಕವೂ ಮುಂದುವರಿಯಿತು. ಸಾಮಾಜಿಕ ಮಾಧ್ಯಮ ದ ಮೂಲಕ ಪರಸ್ಪರ ಪರೋಕ್ಷ ವಿಡಂಬನೆ ಕೂಡ ನಡೆಯಿತು.

ಈ ಹಿಂದೆಯೂ ವಿರಾಟ್ ಕೊಹ್ಲಿ ಕ್ರೀಡಾ ಸ್ಪೂರ್ತಿ ಮೆಚ್ಚುಗೆಗೆ ಪಾತ್ರವಾಗಿತ್ತು. 2019 ರ ವಿಶ್ವಕಪ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವನ ಪಂದ್ಯದಲ್ಲಿ ಅಭಿಮಾನಿಗಳು ಸ್ಟೀವನ್‌ ಸ್ಮಿತ್ ಅವರನ್ನು " ಚೀಟರ್" ಎಂದು ಅಪಹಾಸ್ಯ ಮಾಡುತ್ತಿದ್ದರು. ಇದನ್ನು ಗಮನಿಸಿದ ನಾಯಕ ವಿರಾಟ್ ಕೊಹ್ಲಿ ಅಭಿಮಾನಿಗಳ ಕಡೆ ಕೈ ಬೀಸಿ ಅಪಹಾಸ್ಯ ಮಾಡದಂತೆ ಚಪ್ಪಾಳೆ ಮೂಲಕ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.

2018 ರಲ್ಲಿ ಆಸ್ಟ್ರೇಲಿಯಾ ದ ಡೇವಿಡ್ ವಾರ್ನರ್ ಮತ್ತು ಸ್ಟೀವನ್‌ ಸ್ಮಿತ್ ರನ್ನು ದಕ್ಷಿಣ ಆಫ್ರಿಕಾ ವಿರುಧ್ದ ಬಾಲ್ ಟ್ಯಾಂಪರಿಂಗ್ ಆರೋಪ ದಲ್ಲಿ ಐಸಿಸಿ ಒಂದು ವರ್ಷ ನಿಷೇಧ ಹೇರಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News