×
Ad

ಪ್ಲೇ ಆಫ್ ಸ್ಪರ್ಧೆಯಿಂದ ಹೊರಗುಳಿಯುವ ಭೀತಿಯಲ್ಲಿ ಕೆಕೆಆರ್

Update: 2025-05-08 21:05 IST

PC : PTI 

ಹೊಸದಿಲ್ಲಿ: ಚೆನ್ನೈಸೂಪರ್ ಕಿಂಗ್ಸ್ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ 2 ವಿಕೆಟ್ ಅಂತರದಿಂದ ಸೋತಿರುವ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡ ಪ್ರಸಕ್ತ ಐಪಿಎಲ್ ಟಿ-20 ಟೂರ್ನಿಯ ಪ್ಲೇ ಆಫ್ ಸ್ಪರ್ಧೆಯಿಂದ ಹೊರಗುಳಿಯುವ ಅಪಾಯದಲ್ಲಿದೆ.

ಕೆಕೆಆರ್ ಕೇವಲ 2 ಪಂದ್ಯಗಳು ಆಡಲು ಬಾಕಿ ಉಳಿದಿದ್ದು, ಎರಡೂ ಪಂದ್ಯಗಳನ್ನು ಗೆದ್ದರೆ 15 ಅಂಕ ಗಳಿಸಬಹುದು. ಈಗಾಗಲೇ ಎರಡು ತಂಡಗಳು 16 ಅಂಕ ಗಳಿಸಿವೆ. 15 ಅಂಕ ಹೊಂದಿರುವ ಪಂಜಾಬ್ ಕಿಂಗ್ಸ್ ಇನ್ನೂ 3 ಪಂದ್ಯಗಳನ್ನು ಆಡಲು ಬಾಕಿ ಇದೆ.

ಮುಂಬೈ ಇಂಡಿಯನ್ಸ್ ತಂಡವು ತನ್ನ ಉಳಿದಿರುವ 2 ಪಂದ್ಯಗಳಲ್ಲಿ ಸೋಲನುಭವಿಸಿ 14 ಅಂಕದಲ್ಲೇ ಉಳಿದರೆ ಕೆಕೆಆರ್‌ಗೆ ಮುಂದಿನ ಸುತ್ತಿಗೇರುವ ವಿಶ್ವಾಸ ಮೂಡಲಿದೆ. ಮುಂಬೈ ತಂಡವು ಮೇ 15ರಂದು ಡೆಲ್ಲಿ ತಂಡವನ್ನು ಎದುರಿಸಲಿದೆ.

ಮತ್ತೊಂದೆಡೆ ಪಂಜಾಬ್ ಕಿಂಗ್ಸ್ ತಂಡವು ಇನ್ನುಳಿದ 3 ಪಂದ್ಯಗಳನ್ನು ಸೋತರೆ, ಡೆಲ್ಲಿ, ಪಂಜಾಬ್ ಹಾಗೂ ಕೆಕೆಆರ್ ತಲಾ 15 ಅಂಕ ಗಳಿಸಿ ಪ್ಲೇ ಆಫ್‌ನ 4ನೇ ಸ್ಥಾನಕ್ಕೆ ಪೈಪೋಟಿ ನಡೆಸಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News