×
Ad

ಮುಂಬೈ ವಿರುದ್ಧ ಗೆಲುವು: ಪ್ಲೇಆಫ್ ಟಿಕೆಟ್ ಪಡೆದ ಕೆಕೆಆರ್

Update: 2024-05-12 08:33 IST

Photo: Twitter

ಹೊಸದಿಲ್ಲಿ: ಮಳೆಬಾಧಿತ ಐಪಿಎಲ್ ಪಂದ್ಯದಲ್ಲಿ ಮುಂಬೈ ವಿರುದ್ಧ 18 ರನ್‌ಗಳ ಗೆಲುವು ಸಾಧಿಸಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಪ್ರಸಕ್ತ ಋತುವಿನ ಐಪಿಎಲ್ ನಲ್ಲಿ ಪ್ಲೇಆಫ್ ಹಂತ ತಲುಪಿದೆ.

ಮುಂಬೈ ಭರ್ಜರಿ ಆರಂಭ ಮಾಡಿದರೂ ಸ್ಪಿನ್ ಅವಳಿಗಳಾದ ಸುನಿಲ್ ನರೇನ್ ಮತ್ತು ವರುಣ್ ಚಕ್ರವರ್ತಿ ಮುಂಬೈ ಬ್ಯಾಟ್ಸ್‌ಮನ್‌ಳನ್ನು ಕಟ್ಟಿಹಾಕಿದರು. ಮುಂಬೈ ತಂಡದ ಶಿಸ್ತಿನ ಬೌಲಿಂಗ್ ನಡುವೆಯೂ ವೆಂಕಟೇಶ ಅಯ್ಯರ್ ಅವರ ಸ್ಫೋಟಕ ಬ್ಯಾಟಿಂಗ್ (21 ಎಸೆತಗಳಲ್ಲಿ 42) ನೆರವಿನಿಂದ ಕೆಕೆಆರ್ 16 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು.

ಮುಂಬೈ ತಂಡ 6.4 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 65 ರನ್ ಗಳಿಸಿದರೂ, ಸ್ಟಾರ್ ಸ್ಪಿನ್ನರ್ ನರೇನ್ ನಾಟಕೀಯ ಕುಸಿತಕ್ಕೆ ನಾಂದಿ ಹಾಡಿದರು. 12 ಪಂದ್ಯಗಳಲ್ಲಿ 9 ಗೆಲುವು ಸಾಧಿಸಿದ ಕೆಕೆಆರ್ 18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ.

ವರುಣ್ ಚಕ್ರವರ್ತಿ (2/17) ಮತ್ತು ರಸೆಲ್ (2/34) ಅವರು ಮುಂಬೈ ಇನಿಂಗ್ಸ್ ನ ಬೆನ್ನೆಲುಬನ್ನು 13 ಓವರ್ಗಳ ಒಳಗಾಗಿ ಮುರಿದರು. ಅಂತಿಮವಾಗಿ 8 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿದ ಮುಂಬೈ ಸೋಲೊಪ್ಪಿಕೊಂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News