×
Ad

ಇಂಗ್ಲೆಂಡ್‌ ಗೆ ಬೇಗನೆ ತೆರಳಲು ಕೆ.ಎಲ್.ರಾಹುಲ್ ಸಿದ್ಧತೆ

Update: 2025-05-30 21:19 IST

ಕೆ.ಎಲ್.ರಾಹುಲ್ | PC : PTI

ಹೊಸದಿಲ್ಲಿ: ಇಂಗ್ಲೆಂಡ್ ವಿರುದ್ಧ ಜೂನ್ 20ರಂದು ಆರಂಭವಾಗಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಸಿದ್ಧತೆ ಆರಂಭಿಸಲು ಭಾರತದ ಬ್ಯಾಟರ್ ಕೆ.ಎಲ್.ರಾಹುಲ್ ಆಂಗ್ಲರ ನಾಡಿಗೆ ಬೇಗನೆ ತೆರಳಲು ಸಜ್ಜಾಗಿದ್ದಾರೆ.

ರಾಹುಲ್ ಜೂನ್ 6ರಂದು ತಂಡದ ಉಳಿದ ಸದಸ್ಯರೊಂದಿಗೆ ಇಂಗ್ಲೆಂಡ್‌ ಗೆ ಹೊರಡಬೇಕಿತ್ತು. ಬಿಸಿಸಿಐಯನ್ನು ಸಂಪರ್ಕಿಸಿರುವ ರಾಹುಲ್ ಅವರು ಇಂಗ್ಲೆಂಡ್ ಲಯನ್ಸ್ ವಿರುದ್ಧದ 2ನೇ ಪಂದ್ಯವನ್ನು ಆಡಲು ಅವಕಾಶ ನೀಡಲು ವಿನಂತಿಸಿದ್ದಾರೆ.

ಬಿಸಿಸಿಐ ಇದಕ್ಕೆ ಒಪ್ಪಿಗೆ ನೀಡಿದ್ದು, ಬಲಗೈ ಬ್ಯಾಟರ್ ರಾಹುಲ್ ನಿನ್ನೆ ರಾತ್ರಿ ಅಗತ್ಯ ಅನುಮತಿ ಪಡೆದಿದ್ದಾರೆ. ರಾಹುಲ್ ಸ್ವದೇಶದಲ್ಲಿ ತನ್ನ ಸಿದ್ಧತೆಯನ್ನು ಆರಂಭಿಸಲು ಬಯಸಿದ್ದರು. ಆದರೆ ಮುಂಬೈ ಹಾಗೂ ಬೆಂಗಳೂರಿನ ಹವಾಮಾನವು ಅವರನ್ನು ಬೇಗನೆ ಇಂಗ್ಲೆಂಡ್‌ ಗೆ ತೆರಳುವಂತೆ ಪ್ರೇರೇಪಿಸಿದೆ.

ಆಸ್ಟ್ರೇಲಿಯ ಸರಣಿಗೂ ಮೊದಲು ರಾಹುಲ್ ಭಾರತದ ಟೆಸ್ಟ್ ತಂಡದ ಆಟಗಾರರು ಆಸ್ಟ್ರೇಲಿಯಕ್ಕೆ ಆಗಮಿಸುವ ಮೊದಲೇ ಅಲ್ಲಿಗೆ ತೆರಳಿ, ಇಂಡಿಯಾ ‘ಎ’ ತಂಡದ ಪರ ಪಂದ್ಯವನ್ನು ಆಡಿದ್ದರು.

ಭಾರತ ‘ಎ’ ತಂಡದ ಅನಧಿಕೃತ ಇಂಗ್ಲೆಂಡ್ ಟೆಸ್ಟ್ ಪ್ರವಾಸವು ಶುಕ್ರವಾರ ಇಂಗ್ಲೆಂಡ್ ಲಯನ್ಸ್ ವಿರುದ್ಧ್ದದ 2 ಚತುರ್ದಿನ ಪಂದ್ಯಗಳ ಮೂಲಕ ಆರಂಭವಾಗಿದೆ. ಇದು ಇಂಗ್ಲೆಂಡ್ ವಿರುದ್ಧದ ಮುಂಬರುವ 5 ಪಂದ್ಯಗಳ ಟೆಸ್ಟ್ ಸರಣಿಗೆ ಭಾರತದ ಸಿದ್ಧತೆಗಳ ಪ್ರಮುಖ ಭಾಗವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News