×
Ad

ತಾಳ್ಮೆ ಕಳೆದುಕೊಂಡು ಅಂಪೈರ್ ಮೇಲೆ ಹರಿಹಾಯ್ದ ಕೊಹ್ಲಿ

Update: 2024-04-21 23:00 IST

ಕೊಹ್ಲಿ | PC :NDTV  

ಕೋಲ್ಕತಾ : ಕೆಕೆಆರ್ ವಿರುದ್ಧ ರವಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ವಿವಾದಾತ್ಮಕ ತೀರ್ಪಿನಲ್ಲಿ ಔಟಾದ ನಂತರ ತಾಳ್ಮೆ ಕಳೆದುಕೊಂಡ ಆರ್ ಸಿ ಬಿಯ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅಂಪೈರ್ ಮೇಲೆ ಹರಿಹಾಯ್ದ ಘಟನೆ ನಡೆದಿದೆ.

ತಾನು ಔಟಾಗಿದ್ದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ ಕೊಹ್ಲಿ ಮೈದಾನದೊಳಗಿನ ಅಂಪೈರ್ಗಳೊಂದಿಗೆ ಮಾತಿನ ಚಕಮಕಿ ನಡೆಸಿದರು. ಕೋಪದಿಂದಲೇ ಮೈದಾನವನ್ನು ತೊರೆದರು. ಡ್ರೆಸ್ಸಿಂಗ್ ರೂಮ್ನತ್ತ ಹೋಗುವಾಗ ಬ್ಯಾಟನ್ನು ನೆಲಕ್ಕೆ ಬಡಿದು ತನ್ನ ಬೇಸರ ಹೊರ ಹಾಕಿದರು.

ಕೊಹ್ಲಿ ಅವರು ಹರ್ಷಿತ್ ರಾಣಾ ಬೌಲಿಂಗ್ನಲ್ಲಿ ರಿಟರ್ನ್ ಕ್ಯಾಚ್ ನೀಡಿದರು. ತಕ್ಷಣವೇ ರಿವೀವ್ ಮೊರೆ ಹೋದರು ಆದರೆ ಅದಾಗಲೇ ಅದು ಅಂಪೈರ್ ರಿವೀವ್ನಲ್ಲಿತ್ತು.

ಟಿವಿ ಅಂಪೈರ್ ಔಟ್ ಎಂದು ತೀರ್ಪು ನೀಡಿದಾಗ ಕೊಹ್ಲಿ ತೀವ್ರ ಅಸಮಾಧಾನದೊಂದಿಗೆ ಪೆವಿಲಿಯನ್ ಗೆ ಹೆಜ್ಜೆ ಹಾಕಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News