×
Ad

ಆಸ್ಟ್ರೇಲಿಯದಲ್ಲಿ 30 ಇನಿಂಗ್ಸ್‌ಗಳಲ್ಲಿ ಮೊದಲ ಬಾರಿ ಶೂನ್ಯ ಸಂಪಾದಿಸಿದ ಕೊಹ್ಲಿ

Update: 2025-10-19 21:55 IST

Photo: ICC/X

ಪರ್ತ್, ಅ.19: ವಿಶ್ವದಾದ್ಯಂತದ ಕ್ರಿಕೆಟ್ ಅಭಿಮಾನಿಗಳು ಸುಮಾರು 224 ದಿನಗಳ ನಂತರ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಜೋಡಿಯ ಪುನರಾಗಮನವನ್ನು ಕುತೂಹಲದಿಂದ ಕಾಯುತ್ತಿದ್ದರು. ರೋಹಿತ್ ಹಾಗೂ ವಿರಾಟ್ ದೀರ್ಘ ಸಮಯದ ವಿರಾಮದ ನಂತರ ಕ್ರಿಕೆಟ್ ಮೈದಾನಕ್ಕೆ ಇಳಿದಿದ್ದಾರೆ. ಆದರೆ ಈ ಇಬ್ಬರು ನಿರೀಕ್ಷಿತ ಪ್ರಮಾಣದಲ್ಲಿ ಆರಂಭ ಪಡೆದಿಲ್ಲ.

ಭಾರತ ತಂಡವು ಏಕದಿನ ಕ್ರಿಕೆಟ್‌ನಲ್ಲಿ ಸತತ 16ನೇ ಬಾರಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿತು. ಭಾರತ ತಂಡವು 2023ರ ಸಿಡಬ್ಲ್ಯುಸಿಯಲ್ಲಿ ಕೊನೆಯ ಬಾರಿ ನ್ಯೂಝಿಲ್ಯಾಂಡ್ ವಿರುದ್ಧ ಸೆಮಿ ಫೈನಲ್‌ನಲ್ಲಿ ಟಾಸ್ ಜಯಿಸಿತ್ತು.

ಪಂದ್ಯ ಆರಂಭವಾದ ನಂತರ ಆಸ್ಟ್ರೇಲಿಯದ ಬೌಲರ್‌ಗಳು ಪರ್ತ್‌ನ ಬೌನ್ಸಿ ಪಿಚ್ ಲಾಭ ಪಡೆದರು. ಹೇಝಲ್‌ವುಡ್ ಅವರು ರೋಹಿತ್ ವಿಕೆಟನ್ನು ಉರುಳಿಸಿದರೆ, ಮಿಚೆಲ್ ಸ್ಟಾರ್ಕ್ ಅವರು ವಿರಾಟ್ ಕೊಹ್ಲಿ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು. ಆಸ್ಟ್ರೇಲಿಯದಲ್ಲಿ ಆಡಿರುವ 30 ಏಕದಿನ ಇನಿಂಗ್ಸ್‌ನಲ್ಲಿ ಮೊದಲ ಬಾರಿ ಕೊಹ್ಲಿ ಶೂನ್ಯಕ್ಕೆ ಔಟಾದರು. ರೋಹಿತ್, ಕೊಹ್ಲಿ ಹಾಗೂ ಗಿಲ್ ಮೂವರು ಕೇವಲ 18 ರನ್ ಗಳಿಸಿದರು. ಈ ಹಿಂದೆ 2023ರಲ್ಲಿ ಪಲ್ಲೆಕಲೆಯಲ್ಲಿ ಪಾಕಿಸ್ತಾನದ ವಿರುದ್ದ 25 ರನ್ ಗಳಿಸಿದ್ದರು.

ಈ ಮೂವರು ಔಟಾದ ಬೆನ್ನಿಗೆ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News