ಭಾರತದ ಟಿ-20 ತಂಡದಿಂದ ಕುಲದೀಪ್ ಯಾದವ್ ಹೊರಕ್ಕೆ
ಕುಲದೀಪ್ ಯಾದವ್ | Photo Credit : PTI
ಹೊಸದಿಲ್ಲಿ, ನ.2: ಸದ್ಯ ಆಸ್ಟ್ರೇಲಿಯ ಪ್ರವಾಸದಲ್ಲಿರುವ ಟೀಮ್ ಇಂಡಿಯಾದ ಟಿ-20 ತಂಡದಿಂದ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ರನ್ನು ಬಿಡುಗಡೆ ಮಾಡಲಾಗಿದೆ ಎಂದು ಬಿಸಿಸಿಐ ರವಿವಾರ ದೃಢಪಡಿಸಿದೆ.
ಐದು ಪಂದ್ಯಗಳ ಸರಣಿಯಲ್ಲಿ ಇನ್ನೂ ಎರಡು ಪಂದ್ಯಗಳು ಬಾಕಿ ಇರುವಾಗಲೇ ಈ ಹೆಜ್ಜೆ ಇಡಲಾಗಿದೆ. ಸರಣಿಯು ಸದ್ಯ 1-1ರಿಂದ ಸಮಬಲದಲ್ಲಿದೆ.
ದಕ್ಷಿಣ ಆಫ್ರಿಕಾ ‘ಎ’ ವಿರುದ್ಧ ನ.6ರಿಂದ ಆರಂಭವಾಗಲಿರುವ 2ನೇ ಚತುರ್ದಿನ ಪಂದ್ಯದಲ್ಲಿ ಭಾರತ ಎ’ ತಂಡದಲ್ಲಿ ಭಾಗವಹಿಸಲು ಅವಕಾಶ ನೀಡಲು ಕುಲದೀಪ್ ಯಾದವ್ ರನ್ನು ಬಿಡುಗಡೆ ಮಾಡುವಂತೆ ಭಾರತೀಯ ಟೀಮ್ ಮ್ಯಾನೇಜ್‌ಮೆಂಟ್ ಕೋರಿಕೆ ಸಲ್ಲಿಸಿತ್ತು ಎಂದು ಬಿಸಿಸಿಐ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಭಾರತ ‘ಎ’ ತಂಡವು ದಕ್ಷಿಣ ಆಫ್ರಿಕಾ ‘ಎ’ ವಿರುದ್ದ ಮೊದಲ ಚತುರ್ದಿನ ಪಂದ್ಯವನ್ನು ರೋಚಕವಾಗಿ ಗೆದ್ದುಕೊಂಡಿದೆ.
ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಗೆ ಸಿದ್ಧ್ದತೆ ನಡೆಸಲು ಕುಲದೀಪ್‌ಗೆ ದಕ್ಷಿಣ ಆಫ್ರಿಕಾ ‘ಎ’ ವಿರುದ್ದ ಆಡಲು ಅನುಕೂಲವಾಗುವಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.
ಕುಲದೀಪ್ ಬ್ರಿಸ್ಬೇನ್‌ನಲ್ಲಿ ನಡೆದಿದ್ದ 2ನೇ ಟಿ20 ಪಂದ್ಯವನ್ನಾಡಿದ್ದು, 3.2 ಓವರ್‌ಗಳಲ್ಲಿ 45 ರನ್‌ಗೆ 2 ವಿಕೆಟ್ ಗಳನ್ನು ಪಡೆದಿದ್ದರು.