ಮಾನ್ಸಿ ಸಿಂಗ್ | Photo Credit : PTI

ಜಕಾರ್ತ: ಭಾರತದ ಮಾನ್ಸಿ ಸಿಂಗ್ ರವಿವಾರ ನಡೆದ ಇಂಡೋನೇಶ್ಯ ಮಾಸ್ಟರ್ಸ್ ಸೂಪರ್-100 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಚೀನಾದ ಕ್ಸು ವೆನ್ ಜಿಂಗ್ ವಿರುದ್ಧ ಸೋತಿದ್ದಾರೆ.

ಕೇವಲ 41 ನಿಮಿಷಗಳಲ್ಲಿ ಕೊನೆಗೊಂಡಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ವಿಶ್ವದ ನಂ.76ನೇ ಆಟಗಾರ್ತಿ ಮಾನ್ಸಿ ಚೀನಾದ ಕೆಳ ರ್ಯಾಂಕಿನ ಆಟಗಾರ್ತಿಯ ವಿರುದ್ಧ 16-21, 8-21 ಅಂತರದಿಂದ ಸೋತಿದ್ದಾರೆ.

ವಿಶ್ವದ ನಂ.81ನೇ ಆಟಗಾರ್ತಿ ವೆನ್ ಜಿಂಗ್ ಸೆಮಿ ಫೈನಲ್‌ನಲ್ಲಿ ಮೂರನೇ ಶ್ರೇಯಾಂಕದ ಅನ್ಮೋಲ್ ಖರ್ಬ್‌ರನ್ನು ಮಣಿಸಿದರು. ಮಾನ್ಸಿ ಸಿಂಗ್ ಕೆನಡಾದ ರಾಚೆಲ್ ಚಾನ್‌ರನ್ನು ಮೂರು ಗೇಮ್‌ಗಳ ಅಂತರದಿಂದ ಸೋಲಿಸಿದರು.

ತೀವ್ರ ಪೈಪೋಟಿಯಿಂದ ಕೂಡಿದ ಫೈನಲ್ ಪಂದ್ಯದ ಮೊದಲ ಗೇಮ್‌ನಲ್ಲಿ ವೆನ್ ಜಿಂಗ್ ಅವರು ಭಾರತೀಯ ಎದುರಾಳಿ ವಿರುದ್ಧ ಮೇಲುಗೈ ಸಾಧಿಸಿದರು. ಎರಡನೇ ಗೇಮ್‌ನಲ್ಲಿ ಯಾವುದೇ ಪೈಪೋಟಿ ಕಂಡು ಬರಲಿಲ್ಲ. ಮಾನ್ಸಿ 2-9 ಹಿನ್ನಡೆಯಿಂದ ಚೇತರಿಸಿಕೊಳ್ಳುವಲ್ಲಿ ವಿಫಲರಾದರು. ಹೆಚ್ಚು ಹೋರಾಟವನ್ನು ನೀಡದೆ ಪಂದ್ಯವನ್ನು ಕೈಚೆಲ್ಲಿದರು.

ಇದು ಈ ಋತುವಿನಲ್ಲಿ ಮಾನ್ಸಿ ಅವರ ಜಂಟಿ ಶ್ರೇಷ್ಠ ಪ್ರದರ್ಶನವಾಗಿದೆ. ಈ ವರ್ಷದ ಫೆಬ್ರವರಿಯಲ್ಲಿ ನಡೆದಿದ್ದ ಉಗಾಂಡ ಇಂಟರ್‌ನ್ಯಾಶನಲ್ ಚಾಲೆಂಜ್‌ನಲ್ಲಿ ಮಾನ್ಸಿ ಅವರು ರನ್ನರ್ ಅಪ್ ಆಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor