150 ಟಿ-20 ಪಂದ್ಯಗಳಲ್ಲಿ ನಾಯಕತ್ವ ವಹಿಸಿಕೊಂಡ ಮೊದಲ ಕ್ರಿಕೆಟರ್ ಹರ್ಮನ್ಪ್ರೀತ್ ಕೌರ್
Photo : BCCI
ದುಬೈ,: ಹರ್ಮನ್ಪ್ರೀತ್ ಕೌರ್ ಟಿ-20 ಕ್ರಿಕೆಟ್‌ನಲ್ಲಿ 150 ಪಂದ್ಯಗಳಲ್ಲಿ ನಾಯಕಿಯಾಗಿ ತಂಡವನ್ನು ಮುನ್ನಡೆಸಿದ ಮೊದಲ ಕ್ರಿಕೆಟರ್ ಎನಿಸಿಕೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದರು.
ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಕೌರ್ ಪಾಕಿಸ್ತಾನ ತಂಡದ ವಿರುದ್ಧ 2026ರ ಮಹಿಳೆಯರ ಏಶ್ಯಕಪ್‌ನಲ್ಲಿ ಶನಿವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಈ ಮೈಲಿಗಲ್ಲು ತಲುಪಿದರು. ಪುರುಷರ ಟಿ-20 ಕ್ರಿಕೆಟಿನ ಪ್ರಮುಖ ನಾಯಕರನ್ನು ಕೌರ್ ಹಿಂದಿಕ್ಕಿದ್ದಾರೆ. ನಮೀಬಿಯಾದ ಗೆರ್ಹಾರ್ಡ್ ಪುರುಷರ ದಾಖಲೆ(91)ಹೊಂದಿದ್ದರೆ, ಭಾರತದ ಮಾಜಿ ನಾಯಕ ಎಂ.ಎಸ್.ಧೋನಿ 72 ಟಿ-20 ಪಂದ್ಯಗಳಲ್ಲಿ ನಾಯಕನಾಗಿದ್ದರು.
ಈಗಾಗಲೇ ಸೆಮಿ ಫೈನಲ್‌ನಲ್ಲಿ ಸ್ಥಾನ ಪಡೆದಿರುವ ಭಾರತ ತಂಡವು ಗ್ರೂಪ್ ಹಂತದಲ್ಲಿ ಎಲ್ಲ ಮೂರೂ ಪಂದ್ಯಗಳನ್ನು ಜಯಿಸಿ ಪರಿಪೂರ್ಣ ಪ್ರದರ್ಶನದ ಗುರಿ ಇಟ್ಟುಕೊಂಡಿದೆ.
ಭಾರತದ ಟಿ-20 ಇತಿಹಾಸದಲ್ಲಿ ಅತ್ಯಂತ ಹೆಚ್ಚು ಪಂದ್ಯಗಳಲ್ಲಿ ನಾಯಕಿಯಾಗಿರುವವರ ಪಟ್ಟಿಯಲ್ಲಿ ಕೌರ್ಮೊದಲ ಸ್ಥಾನದಲ್ಲಿದ್ದರೆ, ಶ್ರೀಲಂಕಾದ ಚಾಮರಿ ಅಥಪತ್ತು(121), ಆಸ್ಟ್ರೇಲಿಯದ ಮೆಗ್ ಲ್ಯಾನಿಂಗ್(100), ಇಂಗ್ಲೆಂಡ್‌ನ ಹೀದರ್ ನೈಟ್(96) ಹಾಗೂ ರವಾಂಡದ ಡಿಯಾನ್ ಬಿಮೆನಿಮನ(96) ಆ ನಂತರದ ಸ್ಥಾನದಲ್ಲಿದ್ದಾರೆ.