×
Ad

ವಿಶ್ವಕಪ್: ಶತಕದ ಅಂಚಿನಲ್ಲಿ ಎಡವಿದ ಗಿಲ್ - ಕೊಹ್ಲಿ ಜೋಡಿ

Update: 2023-11-02 16:51 IST

Photo: cricketworldcup.com

ಮುಂಬೈ: ಇಲ್ಲಿನ ವಾಂಖೇಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟರ್ ಗಳಾದ ಶುಬ್ ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಜೋಡಿ ಶತಕದ ಹೊಸ್ತಿಲಿನಲ್ಲಿ ಎಡವಿದರು.

ಗುರುವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ವಿಕೆಟ್ ಪತನದ ಬಳಿಕ ಜೊತೆಯಾದ ಶುಬ್ ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಜೋಡಿ ಭರ್ಜರಿ ಜೊತೆಯಾಟ ನಿರ್ವಹಿಸಿದರು. ಶುಬ್ ಮನ್ ಗಿಲ್ 11 ಬೌಂಡರಿ 2 ಸಿಕ್ಸರ್ ಸಹಿತ 92 ರನ್ ಗೆ ದಿಲ್ಶಾನ್ ಮದುಶಂಕ ವಿಕೆಟ್ ಒಪ್ಪಿಸಿದರೆ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 88 ರನ್ ಗೆ ಮದುಶಂಕ ಬೌಲಿಂಗ್ ನಲ್ಲಿ ಪತುಮ್ ನಿಸಾಂಕ ಹಿಡಿದ ಅದ್ಬುತ ಕ್ಯಾಚ್ ಗೆ ಬಲಿಯಾದರು. ಪರಿಣಾಮ ಕುತೂಹಲದಿಂದ ಕೊಹ್ಲಿಯ 49 ನೇ ಶತಕಕ್ಕೆ ಕಾದಿದ್ದ ಅಭಿಮಾನಿಗಳು ತೀವ್ರ ನಿರಾಸೆಗೆ ಒಳಗಾದರು.

ಭಾರತ 35.1 ಓವರ್ ಗಲ್ಲಿ 229 ರನ್ ಬಾರಿಸಿ ಮೂರು ವಿಕೆಟ್ ಕಳೆದುಕೊಂಡಿದೆ. ಸದ್ಯ ಶ್ರೇಯಸ್ ಐಯ್ಯರ್ 20 ಹಾಗೂ ಕೆಎಲ್ ರಾಹುಲ್ 14 ರನ್ ಗಳಿಸಿ ಬ್ಯಾಟಿಂಗ್ ಮುಮದುವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News