ಮಮ್ದಾನಿ ಡೆಮಾಕ್ರಟಿಕ್ ಪಕ್ಷದ ಭವಿಷ್ಯ: ಮಸ್ಕ್ ಶ್ಲಾಘನೆ
Update: 2025-10-27 22:26 IST
ಎಲಾನ್ ಮಸ್ಕ್ | Photo Credit : PTI
ನ್ಯೂಯಾರ್ಕ್, ಅ.27: ನ್ಯೂಯಾರ್ಕ್ ನಗರದ ಮೇಯರ್ ರೇಸ್‍ನಲ್ಲಿ ಮುಂಚೂಣಿಯಲ್ಲಿರುವ ಝೊಹ್ರಾನ್ ಮಮ್ದಾನಿ ಅಮೆರಿಕಾದಲ್ಲಿ ಡೆಮಾಕ್ರಟಿಕ್ ಪಕ್ಷದ ಭವಿಷ್ಯವಾಗಿದ್ದಾರೆ ಎಂದು ಟೆಸ್ಲಾ ಸಿಇಒ ಮತ್ತು ಈ ಹಿಂದೆ ಟ್ರಂಪ್ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಎಲಾನ್ ಮಸ್ಕ್ ಸೋಮವಾರ ಶ್ಲಾಘಿಸಿದ್ದಾರೆ.
ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ರವಿವಾರ ನ್ಯೂಯಾರ್ಕ್ ನಗರದಲ್ಲಿ ನಡೆದ ರ್ಯಾಲಿಯಲ್ಲಿ ಮಮ್ದಾನಿಯ ಉಮೇದುವಾರಿಕೆಯನ್ನು ಅನುಮೋದಿಸಿರುವ ವೀಡಿಯೊವನ್ನೂ ಮಸ್ಕ್ `ಎಕ್ಸ್'ನಲ್ಲಿ ಹಂಚಿಕೊಂಡಿದ್ದಾರೆ.