×
Ad

ಭಾರತ-ಅಫ್ಘಾನಿಸ್ತಾನದ ಪಂದ್ಯದ ವೇಳೆ ಮೈದಾನ ಪ್ರವೇಶಿಸಿ ಕೊಹ್ಲಿಯನ್ನು ಆಲಂಗಿಸಿದ ಯುವಕ ಪೊಲೀಸ್‌ ವಶಕ್ಕೆ

Update: 2024-01-15 11:44 IST

Photo: PTI

ಇಂದೋರ್:‌ ಮಧ್ಯ ಪ್ರದೇಶದ ಇಂದೋರ್‌ನ ಹೋಲ್ಕರ್‌ ಸ್ಟೇಡಿಯಂನಲ್ಲಿ ರವಿವಾರ ನಡೆದ ಭಾರತ-ಅಫ್ಘಾನಿಸ್ತಾನ ಟಿ20 ಪಂದ್ಯದ ವೇಳೆ ಭದ್ರತೆಯ ನಿಯಮಗಳನ್ನು ಉಲ್ಲಂಘಿಸಿ ಮೈದಾನ ಪ್ರವೇಶಿಸಿ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಅವರನ್ನು ಆಲಂಗಿಸಿದ ಯುವಕನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಘಟನೆ ನಡೆದಾಗ ಕೊಹ್ಲಿ ಫೀಲ್ಡಿಂಗ್‌ ನಡೆಸುತ್ತಿದ್ದರು. ಯುವಕನನ್ನು ಟುಕೋಗಂಜ್‌ ಠಾಣೆಗೆ ಕರೆದೊಯ್ಯಲಾಯಿತು.

ಯುವಕನ ಬಳಿ ಪಂದ್ಯ ವೀಕ್ಷಿಸಲು ಟಿಕೆಟ್‌ ಇತ್ತು ಹಾಗೂ ಆತ ನರೇಂದ್ರ ಹಿರ್ವಾನಿ ಗೇಟ್‌ ಮೂಲಕ ಕ್ರೀಡಾಂಗಣ ಪ್ರವೇಶಿಸಿದ್ದ. ತನ್ನ ನೆಚ್ಚಿನ ಕ್ರಿಕೆಟಿಗನನ್ನು ನೋಡಲು ವೀಕ್ಷಕರ ಗ್ಯಾಲರಿಯ ಬೇಲಿಗಳನ್ನು ಏರಿ ಆತ ಮೈದಾನ ಪ್ರವೇಶಿಸಿದ್ದ.

ಆತನ ತನಿಖೆ ನಡೆಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News