×
Ad

ವಿರಾಟ್ ಕೊಹ್ಲಿ ಐಪಿಎಲ್ ನಲ್ಲೂ ಆಡದೇ ಇರಬಹುದು: ವದಂತಿಗಳಿಗೆ ನಾಂದಿ ಹಾಡಿದ ಸುನಿಲ್ ಗವಾಸ್ಕರ್

Update: 2024-02-27 12:44 IST

ಹೊಸದಿಲ್ಲಿ: ಕೆಲವು ಕಾರಣಗಳಿಂದ ವಿರಾಟ್ ಕೊಹ್ಲಿ ಐಪಿಎಲ್ ಪಂದ್ಯಾವಳಿಯಲ್ಲೂ ಆಡುವುದು ಅನುಮಾನ ಎಂಬ ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕ ವಿವರಣೆಗಾರ ಸುನಿಲ್ ಗಾವಸ್ಕರ್ ಅವರ ಹೇಳಿಕೆ ವದಂತಿಗಳಿಗೆ ನಾಂದಿ ಹಾಡಿದೆ.

ವೈಯಕ್ತಿಕ ಕಾರಣಗಳಿಗಾಗಿ ಇಂಗ್ಲೆಂಡ್ ವಿರುದ್ಧದ ಸರಣಿಯಿಂದ ವಿರಾಟ್ ಕೊಹ್ಲಿ ಹೊರಗುಳಿದಿದ್ದಾರೆ. ಇತ್ತೀಚೆಗಷ್ಟೆ ಕೊಹ್ಲಿ ದಂಪತಿ ಎರಡನೇ ಮಗು ಜನನದ ಕುರಿತು ಮಾಹಿತಿ ನೀಡಿದ್ದರು.

ಸ್ಟಾರ್ ಸ್ಪೋರ್ಟ್ಸ್ ರಾಂಚಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವಾಗ ಸುನಿಲ್ ಗವಾಸ್ಕರ್ ಮೇಲಿನಂತೆ ಪ್ರತಿಕ್ರಿಯಿಸಿದ್ದರು. ಇದೀಗ ವಿರಾಟ್ ಕೊಹ್ಲಿ ಐಪಿಎಲ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಾರೊ ಇಲ್ಲವೊ ಎಂಬ ವದಂತಿಗಳಿಗೆ ಕಾರಣವಾಗಿದೆ.

ಮಾರ್ಚ್ 22ರಂದು ಚೆಪಾಕ್ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ತನ್ನ ಪ್ರಥಮ ಪಂದ್ಯವನ್ನಾಡಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News