×
Ad

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಬ್ಯಾಟ್ ಉಡುಗೊರೆ ನೀಡಿದ ಬಾಂಗ್ಲಾ ಆಲ್ ರೌಂಡರ್ ಮೆಹ್ದಿ ಹಸನ್

Update: 2024-10-03 13:25 IST

Screengrab: X

ಹೊಸದಿಲ್ಲಿ: ಭಾರತದ ತಾರಾ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ಭಾರತ ತಂಡದ ನಾಯಕ ರೋಹಿತ್ ಶರ್ಮಗೆ ಬಾಂಗ್ಲಾದೇಶ ತಂಡದ ಆಲ್ ರೌಂಡರ್ ಮೆಹಿದಿ ಹಸನ್ ಮಿರಾಝ್ ತಮ್ಮದೇ ಕಂಪನಿಯ ಬ್ಯಾಟ್ ಕೊಡುಗೆ ನೀಡುವ ಮೂಲಕ ಗಮನ ಸೆಳೆದರು.

ಬಾಂಗ್ಲಾದೇಶದ ವಿರುದ್ಧ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ.

ತಮ್ಮದೇ ಬ್ಯಾಟ್ ತಯಾರಿಕೆ ಕಂಪನಿಯನ್ನು ಸ್ಥಾಪಿಸಿರುವ ಬಾಂಗ್ಲಾದೇಶ ತಂಡದ ಆಲ್ ರೌಂಡರ್ ಮೆಹ್ದಿ ಹಸನ್ ಮಿರಾಜ್, ವಿರಾಟ್ ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮಗೆ ಬ್ಯಾಟ್ ಗಳನ್ನು ಉಡುಗೊರೆ ನೀಡಿದರು. ಈ ಸಂದರ್ಭದಲ್ಲಿ ಬಂಗಾಳಿ ಭಾಷೆಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ ಮುಗುಳ್ನಕ್ಕರು. ಮಿರಾಝ್ ರಿಂದ ಬ್ಯಾಟ್ ಸ್ವೀಕರಿಸಿದ ವಿರಾಟ್ ಕೊಹ್ಲಿ, “ಖೂಬ್ ಭಲೊ ಅಚ್ಚಿ” (ತುಂಬಾ ಚೆನ್ನಾಗಿದೆ) ಎಂದು ಪ್ರಶಂಸಿಸಿದರು.

ಈ ನಡುವೆ, ತಮಗೆ ಬ್ಯಾಟ್ ಉಡುಗೊರೆ ನೀಡಿದ ಮೆಹ್ದಿ  ಅವರನ್ನು ಅಭಿನಂದಿಸಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ವಿಶೇಷ ಸಂದೇಶವನ್ನು ಹಂಚಿಕೊಂಡಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News