×
Ad

ಹೈದರಾಬಾದ್ ನಲ್ಲಿ ‘ಜೊಹಾರ್ಫಾ’ರೆಸ್ಟೋರೆಂಟ್ ಪ್ರಾರಂಭಿಸಿದ ಕ್ರಿಕೆಟಿಗ ಮುಹಮ್ಮದ್ ಸಿರಾಜ್

Update: 2025-07-01 17:28 IST

ಮುಹಮ್ಮದ್ ಸಿರಾಜ್ | PC : PTI 

ಹೈದರಾಬಾದ್: ಭಾರತೀಯ ಕ್ರಿಕೆಟಿಗ ಮುಹಮ್ಮದ್ ಸಿರಾಜ್ ಅವರು ಹೋಟೆಲ್ ಉದ್ಯಮಕ್ಕೆ ಕಾಲಿರಿಸಿದ್ದು, ಹೈದರಾಬಾದ್ ನಗರದಲ್ಲಿ ತಮ್ಮ ಪ್ರಪ್ರಥಮ ರೆಸ್ಟೋರೆಂಟ್ ‘ಜೊಹಾರ್ಫಾ’ವನ್ನು ಪ್ರಾರಂಭಿಸಿದ್ದಾರೆ.

‘ಜೊಹಾರ್ಫಾ’ ರೆಸ್ಟೋರೆಂಟ್ ಮುಘಲ್ ಶೈಲಿಯ ಭಕ್ಷ್ಯಗಳು, ಪರ್ಷಿಯಾ ಮತ್ತು ಅರೇಬಿಯಾ ಶೈಲಿಯ ಖಾದ್ಯಗಳು ಹಾಗೂ ಚೀನಾ ಶೈಲಿಯ ತಿಂಡಿ-ತಿನಿಸುಗಳನ್ನು ತನ್ನ ಗ್ರಾಹಕರಿಗೆ ಒದಗಿಸಲಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಸಿರಾಜ್ ಮುಹಮ್ಮದ್, “ಜೊಹಾರ್ಫಾ ನನ್ನ ಹೃದಯಕ್ಕೆ ಬಹಳ ಹತ್ತಿರವಾದುದು. ಹೈದರಾಬಾದ್ ನನಗೊಂದು ವ್ಯಕ್ತಿತ್ವ ನೀಡಿ ಗುರುತಿಸಿತು. ಅದಕ್ಕೆ ಪ್ರತಿಕ್ರಿಯೆಯಾಗಿ ಈ ನಗರಕ್ಕೆ ನನ್ನ ಕೊಡುಗೆ ನೀಡಲು ಈ ರೆಸ್ಟೋರೆಂಟ್ ಪ್ರಾರಂಭಿಸಿದ್ದೇನೆ. ಜನರು ಒಟ್ಟಾಗಿ ಬಂದು, ಹಂಚಿ ತಿಂದು, ತಮ್ಮ ಮನೆಯದ್ದೇ ಎಂಬ ಭಾವನೆ ತರುವ ರುಚಿಗಳನ್ನು ಇಲ್ಲಿ ಆಸ್ವಾದಿಸಬಹುದು” ಎಂದು ಹೇಳಿದ್ದಾರೆ.

ಈ ರೆಸ್ಟೋರೆಂಟ್ ಪ್ರಾರಂಭಿಸುವ ಮೂಲಕ, ಈಗಾಗಲೇ ಹೋಟೆಲ್ ಉದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಕ್ರಿಕೆಟ್ ದಿಗ್ಗಜರಾದ ಕಪಿಲ್ ದೇವ್, ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ವಿರಾಟ್ ಕೊಹ್ಲಿಯಂಥವರ ಸಾಲಿಗೆ ಮುಹಮ್ಮದ್ ಸಿರಾಜ್ ಕೂಡಾ ಸೇರ್ಪಡೆಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News