×
Ad

ಹೈದರಾಬಾದ್ ರಣಜಿ ತಂಡದ ನಾಯಕನಾಗಿ ಮುಹಮ್ಮದ್ ಸಿರಾಜ್ ನೇಮಕ

Update: 2026-01-15 11:43 IST

ಮುಹಮ್ಮದ್ ಸಿರಾಜ್ (Photo: PTI)

ಹೈದರಾಬಾದ್: ರಣಜಿ ಟ್ರೋಫಿಯ ಉಳಿದ ಪಂದ್ಯಗಳಿಗೆ ಭಾರತ ತಂಡದ ವೇಗಿ ಮುಹಮ್ಮದ್ ಸಿರಾಜ್ ಅವರನ್ನು ಹೈದರಾಬಾದ್ ತಂಡದ ನಾಯಕರನ್ನಾಗಿ ನೇಮಿಸಲಾಗಿದೆ. ಹೈದರಾಬಾದ್ ತಂಡದ ಅಗ್ರಕ್ರಮಾಂಕದ ಬ್ಯಾಟರ್ ಜಿ. ರಾಹುಲ್ ಸಿಂಗ್ ಅವರನ್ನು ಉಪ ನಾಯಕನನ್ನಾಗಿ ನೇಮಿಸಲಾಗಿದೆ. ಜನವರಿ 22 ಹಾಗೂ ಜನವರಿ 29ರಂದು ಕ್ರಮವಾಗಿ ಮುಂಬೈ ಹಾಗೂ ಛತ್ತೀಸ್ ಗಢ ತಂಡಗಳೆದುರು ನಡೆಯಲಿರುವ ಎರಡು ಪಂದ್ಯಗಳಲ್ಲಿ ಹೈದರಾಬಾದ್ ತಂಡ ಎದುರಾಗಲಿದೆ.

ಮುಹಮ್ಮದ್ ಸಿರಾಜ್ ಸದ್ಯ ನ್ಯೂಝಿಲೆಂಡ್ ತಂಡದೆದುರು ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಆಡುತ್ತಿದ್ದಾರೆ. ವಡೋದರದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಎರಡು ವಿಕೆಟ್ ಗಳನ್ನು ಪಡೆದಿದ್ದ ಮುಹಮ್ಮದ್ ಸಿರಾಜ್, ರಾಜ್ ಕೋಟ್ ನಲ್ಲಿ ನಡೆದ ಪಂದ್ಯದಲ್ಲಿ ಯಾವುದೇ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.

ರಣಜಿ ಟ್ರೋಫಿಯ ಡಿ ಗುಂಪಿನಲ್ಲಿ 13 ಅಂಕಗಳೊಂದಿಗೆ ಹೈದರಾಬಾದ್ ತಂಡ ನಾಲ್ಕನೆಯ ಸ್ಥಾನದಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News