×
Ad

ಮೋಂಟೆ ಕಾರ್ಲೊ ಮಾಸ್ಟರ್ಸ್: ಸ್ಟೆಫನೊಸ್ ಮೂರನೇ ಬಾರಿ ಚಾಂಪಿಯನ್

Update: 2024-04-15 20:20 IST

PC : X 

ಮೋಂಟೆ ಕಾರ್ಲೊ: ಕಾಸ್ಪರ್ ರೂಡ್ ರನ್ನು ನೇರ ಸೆಟ್ ಗಳ ಅಂತರದಿಂದ ಮಣಿಸಿರುವ ಸ್ಟೆಫನೊಸ್ ಸಿಟ್ಸಿಪಾಸ್ ಮೂರನೇ ಬಾರಿ ಪುರುಷರ ಸಿಂಗಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ರವಿವಾರ ನಡೆದ ಫೈನಲ್ ಪಂದ್ಯದಲ್ಲಿ ಗ್ರೀಕ್ ಆಟಗಾರ ಸ್ಟೆಫನೊಸ್ ಅವರು ನಾರ್ವೆಯ ಕಾಸ್ಪರ್ ರೂಡ್ ರನ್ನು 6-1, 6-4 ನೇರ ಸೆಟ್ ಗಳ ಅಂತರದಿಂದ ಸೋಲಿಸಿದ್ದಾರೆ.

ಸೋಮವಾರ ಬಿಡುಗಡೆಯಾಗಿರುವ ಎಟಿಪಿ ರ‍್ಯಾಂಕಿಂಗ್ ನಲ್ಲಿ ಅಗ್ರ-10ಕ್ಕೆ ವಾಪಸಾಗಿರುವ ಸ್ಟೆಫನೊಸ್ 2021 ಹಾಗೂ 2022ರಲ್ಲಿ ಕೂಡ ಪ್ರಶಸ್ತಿ ಜಯಿಸಿದ್ದರು.

ನಾರ್ವೆಯ ಎದುರಾಳಿಯ ವಿರುದ್ಧ ಉತ್ತಮ ಪ್ರದರ್ಶನ ನೀಡಲು ನನ್ನ ತಂಡದೊಂದಿಗೆ ಚರ್ಚೆ ಮಾಡಿದ್ದೆ. ನಾನು ನಿರ್ಭೀತಿಯಿಂದ ಆಡುತ್ತೇನೆಂದು ಹೇಳಿದ್ದೆ. ಹಾಗೆಯೇ ಆಡಿದ್ದೇನೆ ಎಂದು ಸೆಮಿ ಫೈನಲ್ ನಲ್ಲಿ ವಿಶ್ವದ ನಂ.2ನೇ ಆಟಗಾರ ಹಾಗೂ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಜನ್ನಿಕ್ ಸಿನ್ನೆರ್ರನ್ನು ಸೋಲಿಸಿದ್ದ ಸ್ಟೆಫನೊಸ್ ಹೇಳಿದ್ದಾರೆ.

ಸ್ಟೆಫನೊಸ್ ಅವರು ಮೂರು ಇಲ್ಲವೇ ಅದಕ್ಕಿಂತ ಹೆಚ್ಚು ಬಾರಿ ಮೋಂಟೆ ಕಾರ್ಲೊ ಪ್ರಶಸ್ತಿಯನ್ನು ಜಯಿಸಿರುವ ಐದನೇ ಆಟಗಾರನಾಗಿದ್ದಾರೆ. ಈ ಮೂಲಕ ರಫೆಲ್ ನಡಾಲ್(11), ಜೋರ್ನ್ ಬೊರ್ಗ್, ಥಾಮಸ್ ಮಸ್ಟರ್ ಹಾಗೂ ಲೀ ನಾಸ್ಟೇಸ್ರನ್ನು ಸೇರಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News