ಭಾರತ ಕ್ರಿಕೆಟ್ ತಂಡದ ಪರ ಹೆಚ್ಚು ಪಂದ್ಯಗಳಲ್ಲಿ ಗೆಲುವು: ಧೋನಿ ದಾಖಲೆ ಹಿಂದಿಕ್ಕಿದ ಕೊಹ್ಲಿ
ಹೊಸದಿಲ್ಲಿ: ವಿರಾಟ್ ಕೊಹ್ಲಿ ಹಲವು ವರ್ಷಗಳಿಂದ ಭಾರತೀಯ ಕ್ರಿಕೆಟ್ ತಂಡದ ಬ್ಯಾಟಿಂಗ್ ಸರದಿಯ ಆಧಾರಸ್ತಂಭವಾಗಿದ್ದಾರೆ ಹಾಗೂ ಅವರು ಈಗಾಗಲೇ ರಾಷ್ಟ್ರೀಯ ತಂಡದೊಂದಿಗೆ ಅನೇಕ ಏರಿಳಿತಗಳನ್ನು ಕಂಡಿದ್ದಾರೆ. ಕೊಹ್ಲಿ ಪ್ರಸ್ತುತ ವೆಸ್ಟ್ ಇಂಡೀಸ್ ನಲ್ಲಿದ್ದಾರೆ., ಅಲ್ಲಿ ಭಾರತವು ಮೊದಲ ಟೆಸ್ಟ್ ಅನ್ನು ಸುಲಭವಾಗಿ ಗೆದ್ದುಕೊಂಡಿದೆ. ಈ ಫಲಿತಾಂಶದ ಮೂಲಕ ಕೊಹ್ಲಿ ಅವರು ಸ್ಟಾರ್ ಬ್ಯಾಟರ್ ಎಂ.ಎಸ್.ಧೋನಿ ಅವರನ್ನು ಗಣ್ಯರ ಪಟ್ಟಿಯಲ್ಲಿ ಮೀರಿಸಿದ್ದಾರೆ.
ಕೊಹ್ಲಿ 296 ನೇ ಬಾರಿಗೆ ಭಾರತೀಯ ಕ್ರಿಕೆಟ್ ತಂಡದ ಗೆಲುವಿನ ಭಾಗವಾದರು. ಮಾಜಿ ನಾಯಕ ಧೋನಿಗಿಂತ ಒಂದು ಪಂದ್ಯ ಮುಂದಿದ್ದಾರೆ. ಈ ದಾಖಲೆಯು ಸದ್ಯ ಲೆಜೆಂಡರಿ ಬ್ಯಾಟರ್ ಸಚಿನ್ ತೆಂಡುಲ್ಕರ್ ಅವರ ಹೆಸರಿನಲ್ಲಿದೆ, ಅವರು ತಮ್ಮ ಸುಪ್ರಸಿದ್ಧ ವೃತ್ತಿಜೀವನದ ಅವಧಿಯಲ್ಲಿ ಭಾರತಕ್ಕೆ 307 ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ.
ಎರಡು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ನ 3 ನೇ ದಿನದಂದು ವೆಸ್ಟ್ ಇಂಡೀಸ್ ಅನ್ನು ಇನಿಂಗ್ಸ್ ಮತ್ತು 141 ರನ್ ಗಳಿಂದ ಭಾರತ ಸೋಲಿಸಿತು.
ರೋಹಿತ್ ಶರ್ಮಾ ನೇತೃತ್ವದ ತಂಡವು ಆತಿಥೇಯರ ಮೇಲೆ ಸುಲಭವಾಗಿ ಪ್ರಾಬಲ್ಯ ಸಾಧಿಸಿತು, ಚೊಚ್ಚಲ ಪಂದ್ಯದಲ್ಲಿ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 171 ರನ್ ಗಳ ಅಬ್ಬರದ ಬ್ಯಾಟಿಂಗ್ ಮಾಡಿದರು, ನಂತರ ರವಿಚಂದ್ರನ್ ಅಶ್ವಿನ್ 12 ವಿಕೆಟ್ ಗಳನ್ನು ಕೆಡವಿದರು.