×
Ad

ಅಲ್ಕರಾಝ್-ಝೆರ್ವೆವ್ ಪಂದ್ಯ ನೋಡಿ ಆನಂದಿಸಿದ ಎಂ.ಎಸ್.ಧೋನಿ

Update: 2023-09-07 21:04 IST

Photo: twitter/@ICCAsiaCricket

ನ್ಯೂಯಾರ್ಕ್: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 2023ರ ಯು.ಎಸ್. ಓಪನ್‌ನಲ್ಲಿ ಕಾರ್ಲೊಸ್ ಅಲ್ಕರಾಝ್ ಹಾಗೂ ಅಲೆಕ್ಸಾಂಡರ್ ಝ್ವೆರೆವ್ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯವನ್ನು ವೀಕ್ಷಿಸಿ ಆನಂದಿಸಿದರು.

ಯು.ಎಸ್. ಓಪನ್‌ನ ಅಧಿಕೃತ ಪ್ರಸಾರ ಸಂಸ್ಥೆಯು ಅಲ್ಕರಾಝ್ ಹಾಗೂ ಝ್ವೆರೆವ್ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯದ ವೀಡಿಯೊವನ್ನು ಹಂಚಿಕೊಂಡಿದ್ದು, ಪ್ರೇಕ್ಷಕರ ಗ್ಯಾಲರಿನಲ್ಲಿ ಕುಳಿತಿದ್ದ ಧೋನಿ ರೋಚಕ ಸ್ಪರ್ಧೆಯನ್ನು ವೀಕ್ಷಿಸುತ್ತಿರುವ ಕ್ಷಣವನ್ನು ಸೆರೆ ಹಿಡಿದಿದೆ.

ಅರ್ಥರ್ ಅಶೆ ಸ್ಟೇಡಿಯಮ್‌ನಲ್ಲಿ 2011ರ ವಿಶ್ವಕಪ್ ವಿಜೇತ ತಂಡದ ನಾಯಕನೊಂದಿಗೆ ಸೆಲ್ಫಿ ತೆಗೆದುಕೊಂಡ ಅಭಿಮಾನಿಯೊಬ್ಬ ಅದನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾನೆ. ವಿಶ್ವದ ನಂ.1 ಆಟಗಾರ ಧೋನಿ ಜರ್ಮನಿಯ ಝ್ವೆರೆವ್‌ರನ್ನು ಕ್ವಾರ್ಟರ್ ಫೈನಲ್‌ನಲ್ಲಿ ಮಣಿಸಿದ್ದು  ಸೆಮಿ ಫೈನಲ್‌ನಲ್ಲಿ ಡೇನಿಯಲ್ ಮೆಡ್ವೆಡೆವ್ ಸವಾಲನ್ನು ಎದುರಿಸಲಿದ್ದಾರೆ.

ಧೋನಿ ಈ ವರ್ಷಾರಂಭದಲ್ಲಿ ಚೆನ್ನೈಸೂಪರ್ ಕಿಂಗ್ಸ್ ತಂಡ ಐಪಿಎಲ್ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಜಯ ಸಾಧಿಸಿ ಐದನೇ ಬಾರಿ ಪ್ರಶಸ್ತಿ ಜಯಿಸುವಲ್ಲಿ ನೆರವಾಗಿದ್ದರು. ಸಿಎಸ್‌ಕೆ 2023ರ ಐಪಿಎಲ್ ಪ್ರಶಸ್ತಿ ಗೆದ್ದ ನಂತರ ಧೋನಿ ಅವರು ಮುಂದಿನ ವರ್ಷದ ಐಪಿಎಲ್‌ನಲ್ಲೂ ಆಡುವುದಾಗಿ ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News