×
Ad

ತನ್ನ ಎಸೆತಕ್ಕೆ ಸಿಕ್ಸರ್ ಸಿಡಿಸಿದ ಶ್ರೇಯಸ್ ಅಯ್ಯರ್ ಗೆ ಮುಹಮ್ಮದ್ ಸಿರಾಜ್ ಪ್ರಶಂಸೆ!

Update: 2024-03-30 19:50 IST

PHOTO: X \ @IPL 

ಬೆಂಗಳೂರು: ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಎಂ.ಚಿನ್ನಸ್ವಾಮಿ ಸ್ಟೇಡಿಯಮ್ ನಲ್ಲಿ ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗದ ಬೌಲರ್ ಮುಹಮ್ಮದ್ ಸಿರಾಜ್ ತನ್ನ ಎಸೆತವನ್ನು ಸಿಕ್ಸರ್ ಗೆ ಅಟ್ಟಿದ ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ರನ್ನು ಚಪ್ಪಾಳೆ ತಟ್ಟಿ ಪ್ರಶಂಸಿಸುವ ಮೂಲಕ ಗಮನ ಸೆಳೆದರು.

ಮುಹಮ್ಮದ್ ಸಿರಾಜ್ ಅವರ 15ನೇ ಓವರ್ ನ ಅಂತಿಮ ಎಸೆತವನ್ನು ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಸಿಕ್ಸರ್ ಗೆ ಅಟ್ಟಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಸಿರಾಜ್ ಅವರ ಎಸೆತವನ್ನು ಲಾಂಗ್-ಆನ್ನತ್ತ ತಳ್ಳಿದ ಅಯ್ಯರ್ ಸಿಕ್ಸರ್ ಸಿಡಿಸಿದರು. ತಾನೆಸೆದ ಚೆಂಡು ಸಿಕ್ಸರ್ ಗಡಿ ದಾಟಿದಾಗ ಸಿರಾಜ್ ಈ ಹೊಡೆತಕ್ಕೆ ಚಪ್ಪಾಳೆ ತಟ್ಟಿ ಪ್ರಶಂಸಿಸಿದರು. ಸಿರಾಜ್ ಚಪ್ಪಾಳೆ ತಟ್ಟುವ ವೀಡಿಯೊ ಕ್ಲಿಪ್ ವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ.

ಇದು ಐಪಿಎಲ್ ನಲ್ಲಿ ಶ್ರೇಯಸ್ ಅಯ್ಯರ್ ಸಿಡಿಸಿರುವ 100ನೇ ಸಿಕ್ಸರ್ ಆಗಿದೆ.

2016ರ ನಂತರ ಎಂ.ಚಿನ್ನಸ್ವಾಮಿ ಸ್ಟೇಡಿಯಮ್ ನಲ್ಲಿ ಆರ್ ಸಿ ಬಿ ವಿರುದ್ಧ ಕೆಕೆಆರ್ ಸತತ ಆರನೇ ಗೆಲುವು ದಾಖಲಿಸಿದೆ.

2008 ಹಾಗೂ 2015ರ ಮಧ್ಯೆ ತವರು ಮೈದಾನದಲ್ಲಿ ಆರ್ ಸಿ ಬಿ ತಂಡ ಕೆಕೆಆರ್ ವಿರುದ್ಧ 4-2 ಗೆಲುವಿನ ದಾಖಲೆ ಹೊಂದಿದೆ.

ಕೆಕೆಆರ್ ಇದೀಗ ಆರ್ ಸಿ ಬಿ ವಿರುದ್ಧ ಹಿಂದಿನ 6 ಪಂದ್ಯಗಳಲ್ಲಿ 5ರಲ್ಲಿ ಜಯಭೇರಿ ಬಾರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News