×
Ad

ನನ್ನ ಹೋರಾಟ ಮುಗಿದಿಲ್ಲ, ಈಗಷ್ಟೆ ಆರಂಭವಾಗಿದೆ: ಕುಸ್ತಿಪಟು ವಿನೇಶ್ ಫೋಗಟ್

Update: 2024-08-26 13:42 IST

ವಿನೇಶ್‌ ಫೋಗಟ್‌ (Photo:X/@erbmjha)

ರೋಹ್ಟಕ್‌: 'ನನ್ನ ಹೋರಾಟ ಮುಗಿದಿಲ್ಲ, ಈಗಷ್ಟೇ ಆರಂಭವಾಗಿದೆ' ಎಂದು ಕುಸ್ತಿಪಟು ವಿನೇಶ್‌ ಫೋಗಟ್‌ ಹೇಳಿದ್ದಾರೆ.

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ನಿಗದಿಗಿಂತ 100 ಗ್ರಾಂ ಅಧಿಕ ತೂಕವಿದ್ದ ಕಾರಣಕ್ಕೆ ಮಹಿಳೆಯರ 50 ಕೆ.ಜಿ ವಿಭಾಗದ ಕುಸ್ತಿ ಫೈನಲ್‌ನಿಂದ ವಿನೇಶ್ ಅನರ್ಹಗೊಂಡಿದ್ದರು. ಅವರಿಗೆ ರೋಹ್ಟಕ್‌ ನ 'ಸರ್ವಖಾಪ್‌ ಪಂಚಾಯತ್‌' ವತಿಯಿಂದ ಚಿನ್ನದ ಪದಕ ನೀಡಿ ರವಿವಾರ ಗೌರವಿಸಲಾಯಿತು.

ಗೌರವ ಸ್ವೀಕರಿಸಿ ಮಾತನಾಡಿದ ವಿನೇಶ್ ಫೋಗಟ್‌, 'ಈ ಗೌರವವು ಯಾವುದೇ ಪದಕಕ್ಕಿಂತ ದೊಡ್ಡದು. ನಾನಿದಕ್ಕೆ ಸದಾ ಋಣಿಯಾಗಿರುತ್ತೇನೆ' ಎಂದು ಭಾವುಕರಾದರು.

ಭಾರತೀಯ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ನಾಯಕ ಬ್ರಿಜ್‌ ಭೂಷಣ್‌ ಶರಣ್ ಸಿಂಗ್‌ ಅವರು ಮಹಿಳಾ ಕುಸ್ತಿಪಟುಗಳಿಗೆ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕುರಿತು ಮಾತನಾಡಿದ ಅವರು, 'ನಮ್ಮ ಹೆಣ್ಣುಮಕ್ಕಳ ಗೌರವಕ್ಕಾಗಿ ಹೋರಾಟ ಈಗಷ್ಟೇ ಪ್ರಾರಂಭವಾಗಿದೆ. ಇದೇ ಮಾತನ್ನು ಧರಣಿ ಸತ್ಯಾಗ್ರಹದ ಸಂದರ್ಭದಲ್ಲೂ ಹೇಳಿದ್ದೆವು' ಎಂದರು.

'ಒಲಿಂಪಿಕ್ಸ್ ಫೈನಲ್‌ನಲ್ಲಿ ಸ್ಪರ್ಧಿಸಲು ಆಗದಿದ್ದಾಗ, ನನಗೆ ಅದೃಷ್ಟವಿಲ್ಲ ಎಂದುಕೊಂಡಿದ್ದೆ. ಆದರೆ, ದೇಶಕ್ಕೆ ಮರಳಿದ ನಂತರ ದೊರೆತ ಪ್ರೀತಿ, ಬೆಂಬಲ ಕಂಡು ನಾನು ಅದೃಷ್ಟವಂತೆ ಎನಿಸಿತು' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News